ಮೃತ ವನಿತಾ ಸಾಯುವ ಮುಂಚೆ ನಾಲ್ಕು ಪುಟದ ಡೆತ್ ನೋಟ್ ಬರೆದಿದ್ದಾಳೆ. ವನೀತಾಳಿಗೆ ಆಕೆಯ ಅತ್ತೆ ಗಾಯತ್ರಿ ನಿತ್ಯ ಮನೆಯಲ್ಲಿ ಕಿರುಕುಳ ನೀಡುತಿದ್ದರು. ಅಪ್ಪನ ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತಿದ್ದರು. ಅಲ್ಲದೆ ಸರಿಯಾಗಿ ಊಟ ತಿಂಡಿಯನ್ನು ನೀಡದೆ ಹಿಂಸೆ ನೀಡುತಿದ್ದರು ಎನ್ನಲಾಗಿದೆ.
ಬೆಂಗಳೂರು(ಡಿ.2): ಸಿ ಎಂ ಆಪ್ತ, ಮೈಸೂರು ಕಾರ್ಪೊರೇಟರ್ ನಾಗಭೂಷಣ್ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್'ನಲ್ಲಿ ನಡೆದಿದೆ. ಕಳೆದ ಏಳು ತಿಂಗಳ ಹಿಂದಷ್ಟೆ ತಮಿಳುನಾಡು ಮೂಲದ ಟೆಕ್ಕಿ ವಸಂತ್ ಎಂಬುವವನ ಕೈ ಹಿಡಿದಿದ್ದ ವನಿತಾ , ಹೆಚ್ ಎಸ್ ಆರ್ ಲೇಔಟ್'ನ 25ನೇ ಕ್ರಾಸ್'ನ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದಳು.
ಮೃತ ವನಿತಾ ಸಾಯುವ ಮುಂಚೆ ನಾಲ್ಕು ಪುಟದ ಡೆತ್ ನೋಟ್ ಬರೆದಿದ್ದಾಳೆ. ವನೀತಾಳಿಗೆ ಆಕೆಯ ಅತ್ತೆ ಗಾಯತ್ರಿ ನಿತ್ಯ ಮನೆಯಲ್ಲಿ ಕಿರುಕುಳ ನೀಡುತಿದ್ದರು. ಅಪ್ಪನ ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತಿದ್ದರು. ಅಲ್ಲದೆ ಸರಿಯಾಗಿ ಊಟ ತಿಂಡಿಯನ್ನು ನೀಡದೆ ಹಿಂಸೆ ನೀಡುತಿದ್ದರು ಎನ್ನಲಾಗಿದೆ.
ಈ ಎಲ್ಲಾ ಘಟನೆಗಳಿಂದ ಬೇಸತ್ತು ವನಿತಾ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಆಕೆಯೇ ಡೆತ್ ನೋಟ್ ನಲ್ಲಿ ಊಲ್ಲೇಖ ಮಾಡಿದ್ದಾರೆ. ನಿನ್ನೆ ಸಂಜೆ ಸುಮಾರು ಆರೂವರೆ ಗಂಟೆಯಲ್ಲಿ ಈ ಘಟನೆ ನಡೆದಿದ್ದು ರಾತ್ರಿ ಎಂಟರ ಸುಮಾರಿಗೆ ಗಂಡ ಮನೆಗೆ ಬಂದಾಗ ವಿಷಯ ತಿಳಿದು ಬಂದಿದೆ. ನಂತರ ಹೆಚ್ ಎಸ್ ಆರ್ ಲೇಔಟ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು , ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಸೆಂಟ್ ಜಾನ್ಸ್ ಅಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ವನೀತಳ ಗಂಡ ವಸಂತ್ ಮತ್ತು ಅತ್ತೆ ಗಾಯತ್ರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.