ಮೈಸೂರು(ನ. 04): ಅರಮನೆ ನಗರಿಯ ಜನತೆಗೆ ಇದು ನಿಜಕ್ಕೂ ಶಾಕಿಂಗ್​ ನ್ಯೂಸ್​. ಮಕ್ಕಳನ್ನು ಕದ್ದು ಮಾರಾಟ ಮಾರುವವರು ಮೈಸೂರಿನಲ್ಲೇ ಇರೋದು ದೃಢಪಟ್ಟಿದೆ.​ ಇಲ್ಲಿಯ ಮಂಡಿ ಮೊಹಲ್ಲಾದ ನಸೀಮ್​ ನರ್ಸಿಂಗ್​ ಹೋಮ್'ವೊಂದರ​ ಡಾಕ್ಟರ್​ ಉಷಾ ಎನ್ನುವಾಕೆಯೇ ಮಕ್ಕಳನ್ನ ಕಳ್ಳತನ ಮಾಡಿಸಿ ಮಾರಾಟ ಮಾಡುವ ಕಿರಾತಕಿ. ಹಲವು ವರ್ಷಗಳ ಈಕೆಯ ದಂಧೆಯಲ್ಲಿ ಮೈಸೂರು, ನಂಜನಗೂಡು, ಮಂಡ್ಯ ಜಿಲ್ಲೆಗಳಲ್ಲಿ ಸುಮಾರು 18 ಹಸುಗೂಸುಗಳು ನಲುಗಿ ಹೋಗಿವೆ.

ಇದೇ ಏಪ್ರಿಲ್​​ 21ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಬಿಕ್ಷುಕಿಯೊಬ್ಬಳ ಬಳಿ ಮಲಗಿದ್ದ ಮೂರು ತಿಂಗಳ ಕಂದಮ್ಮನನ್ನ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದರು. ಮಗುವಿಗಾಗಿ ಆಕೆ ಚೀರಾಡಿದಾಗ ಕೆಲವರು ದುಷ್ಕರ್ಮಿಗಳನ್ನ ಚೇಸ್​ ಮಾಡುವ ಪ್ರಯತ್ನ ಮಾಡಿದ್ರೂ ಪ್ರಯೋಜನ ಆಗಲಿಲ್ಲ. ಕೇಸ್ ಬುಕ್ ಮಾಡಿ​ಕೊಂಡಿದ್ದ ನಂಜನಗೂಡು ಪೊಲೀಸರು, ಪಾತಾಳ ಗರಡಿ ಹಿಡಿದು ಫೀಲ್ಡಿಗೆ ಎಂಟ್ರಿ ಕೊಟ್ಟರು. ಆಗಲೇ ಇಡೀ ಮೈಸೂರೇ ಶೇಕ್ ಆಗುವಂತಹ ಸ್ಫೋಟಕ ವಿಚಾರ ಬಯಲಿಗೆ ಬಂದಿರೋದು.

ನಂಜನಗೂಡು ಕೇಸ್ ಸಂಬಂಧ ಮಹೇಶ್​, ಮೋಹನ್​, ರೇಖಾ ಅವರನ್ನ ಪೊಲೀಸರು ಬಂಧಿಸಿ ಕೋರ್ಟ್'​​ಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಟ್ಟ ಮಾಹಿತಿ ಮೇರೆಗೆ ಡಾಕ್ಟರ್​ ಉಷಾ ಪಾತ್ರ ಸಾಬೀತಾಗಿದ್ದು ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಶ್ರೀಮಂತರಿಗೆ ಮಕ್ಕಳನ್ನು ಮಾರಲು ಬಡ, ನಿರ್ಗತಿಕ, ಭಿಕ್ಷುಕ ಕುಟುಂಬಗಳನ್ನ ಟಾರ್ಗೆಟ್ ಮಾಡುತ್ತಿದ್ದ ವಿಚಾರವನ್ನ ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ವಿಚಾರಣೆ ವೇಳೆ ತಾವು ನಂಜನಗೂಡಿನಲ್ಲಿ ಭಿಕ್ಷುಕಿ ಬಳಿ ಅಪಹರಿಸಿದ ಮಗುವನ್ನು ಬೆಂಗಳೂರಿನ ಡಾಕ್ಟರ್​ ಒಬ್ಬರಿಗೆ ಒಂದೂವರೆ ಲಕ್ಷಕ್ಕೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಜಾಲದ ಹಿಂದೆ ಪ್ರಭಾವಿಗಳ ಪಾತ್ರದ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ  ಮೈಸೂರಿನ ಅನಾಥ, ಭಿಕ್ಷುಕ ಕುಟುಂಬದ ಮಕ್ಕಳನ್ನು ಕದ್ದೊಯ್ಯುವ ಭಯಾನಕ ಜಾಲ ಬಯಲಾಗಿದೆ. ಆದ್ರೆ ಅದೆಷ್ಟು ಮಕ್ಕಳನ್ನು ಮಾರಾಟ ಮಾಡಿದ್ದಾರೆ ಅನ್ನೋದನ್ನ ಮೈಸೂರು ಪೊಲೀಸ್ರು ಪ್ರಾಮಾಣಿಕವಾಗಿ ಬಯಲಿಗೆ ತರಬೇಕಿದೆ.

- ಮಧು ಎಂ. ಚಿನಕುರಳಿ, ಮೈಸೂರು

(ಫೋಟೋದಲ್ಲಿರುವುದು ಮೈಸೂರು ಎಸ್'ಪಿ ರವಿ ಚನ್ನಣ್ಣನವರ್)