ಯಾಂಗೋನ್‌[ಮೇ.13]: ಮುಂದಿನ ಚಕ್ರಗಳು ತೆರೆದುಕೊಳ್ಳುವುದರಲ್ಲಿ ವಿಫಲವಾದರೂ ಧೃತಿಗೆಡದ ಪೈಲಟ್‌, ವಿಮಾನದ ಮೂತಿಯ ಮೇಲೆ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಘಟನೆ ಮ್ಯಾನ್ಮಾರ್‌ನಲ್ಲಿ ಭಾನುವಾರ ನಡೆದಿದೆ.

ಮ್ಯಾನ್ಮಾರನ್‌ ನ್ಯಾಷನಲ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನ ತಡಾ- ಯುನ ಮಂಡಾಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ವೇಳೆ, ಗಿಯರ್‌ ವೈಫಲ್ಯದಿಂದಾಗಿ ಮುಂದಿನ ಚಕ್ರಗಳು ತೆರೆದುಕೊಳ್ಳಲೇ ಇಲ್ಲ. ಆದರೆ ಈ ವೇಳೆ ಧೃತಿಗೆಡದ ಪೈಲಟ್‌ ವಿಮಾನ ಮೂತಿಯನ್ನೇ ಆಧಾರವಾಗಿ ಬಳಸಿಕೊಂಡು ಯಾವುದೇ ಅನಾಹುತವಾಗದಂತೆ ವಿಮಾನವನ್ನು ಯಶಸ್ವಿಯಾಗಿ ಇಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಿಲ್ಲ. ವಿಮಾನದಲ್ಲಿ ಎಷ್ಟುಪ್ರಯಾಣಿಕರು ಇದ್ದರು ಎಂಬುದನ್ನು ವಿಮಾನಯಾನ ಸಂಸ್ಥೆ ಬಹಿರಂಗಪಡಿಸಿಲ್ಲ.