ಈಗಾಗಲೇ ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಲು ತಯಾರಿ ಆರಂಭವಾಗಿದ್ದು ಸೂಕ್ತ ಸಿದ್ಧತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ನವದೆಹಲಿ : ಐದು ರಾಜ್ಯಗಳಲ್ಲಿ ಈಗಾಗಲೇ ಚುನಾವಣೆ ಕಣ ರಂಗೇರುತ್ತಿದೆ. ಇದೇ ವರ್ಷ ಡಿಸೆಂಬರ್ ವೇಳೆಗೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಲು ನಿರ್ಧಾರ ಮಾಡಲಾಗಿದೆ.
ಈ ಸಂಬಂಧ ನಮೋ ಆ್ಯಪ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು, ಬಿಜೆಪಿ ಬಲಪಡಿಸಲು ಯಾವ ರೀತಿ ಕಾರ್ಯಪೃವೃತ್ತರಾಗಬೇಕು ಎನ್ನುವುದನ್ನು ತಿಳಿಸಿದ್ದಾರೆ.
ಅಲ್ಲದೇ ಕಠಿಣ ಪರಿಶ್ರಮದಿಂದಲೇ ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕವಾದ ಗೆಲುವನ್ನು ಸಾಧಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ನನ್ನ ವ್ಯಾಪ್ತಿಯ ಪ್ರದೇಶವನ್ನು ನಾನು ಬಲಪಡಿಸಬೇಕು ಎನ್ನುವ ಮಂತ್ರವೇ ಗೆಲುವಿನ ಮಂತ್ರವಾಗಿರುತ್ತದೆ ಎಂದು ಅವರು ಹೇಳಿದರು.
ಇನ್ನು ಇದೇ ವೇಳೆ ಬಿಜೆಪಿ ಒಂದರಲ್ಲಿ ಮಾತ್ರವೇ ಸಾಮಾನ್ಯನೂ ಕೂಡ ಪ್ರಧಾನಿ ಅಭ್ಯರ್ಥಿಯಾಗಬಲ್ಲ. ಆದರೆ ಅತ್ತಂತ ಪ್ರಭಲ ನಾಯಕರಿದ್ದರೂ ಕೂಡ ಅವರೆಲ್ಲರೂ ಒಂದೇ ಕುಟುಂಬದ ಹಿತಾಸಕ್ತಿಗಾಗಿ ದುಡಿಯುವುದು ಕಾಂಗ್ರೆಸ್ ಪಕ್ಷದಲ್ಲಿರುವಂತಹ ವಿಚಾರವಾಗಿದೆ. ಅವರೆಲ್ಲರೂ ಕೂಡ ತಮ್ಮ ಹಿತಾಸಕ್ತಿಗಳನ್ನೇ ತ್ಯಾಗ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
