ನನ್ನಿಂದ ತಪ್ಪಾಯ್ತು: ಗುಜರಾತ್ ಯುವ ನಾಯಕ ಹಾರ್ದಿಕ್ ಪಟೇಲ್

First Published 10, Mar 2018, 10:31 PM IST
My meet with Rahul would have prevented BJPs Gujarat win Says Hardik Patel
Highlights

ಗುಜರಾತ್ ಪತಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಗುಜರಾತ್ ಚುನಾವಣೆ ಸಂದರ್ಭದಲ್ಲಿ ತನ್ನಿಂದ ತಪ್ಪಾಗಿದೆಯೆಂದು ಹೇಳಿದ್ದಾರೆ.

ಮುಂಬೈ: ಗುಜರಾತ್ ಪತಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಗುಜರಾತ್ ಚುನಾವಣೆ ಸಂದರ್ಭದಲ್ಲಿ ತನ್ನಿಂದ ತಪ್ಪಾಗಿದೆಯೆಂದು ಹೇಳಿದ್ದಾರೆ.

ಗುಜರಾತ್ ಚುನಾವಣೆ ಮುನ್ನ ತಾನು ರಾಹುಲ್ ಗಾಂಧಿಯವರನ್ನು ಭೇಟಿಯಾಗದೇ ತಪ್ಪಸೆಗಿದ್ದೇನೆ. ಅವರನ್ನು ಭೇಟಿಯಾಗಿರುತ್ತಿದ್ದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದಿತ್ತು, ಎಂದು ಅವರು ಹೇಳಿದ್ದಾರೆ.

ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಹಾರ್ದಿಕ್ ಪಟೇಲ್, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಉದ್ಧವ್ ಠಾಕ್ರೆಯವರಂತೆ, ರಾಹುಲ್ ಗಾಂಧಿಯನ್ನು ಭೇಟಿಯಾಗಬಹುದಿತ್ತು. ಆದರೆ ನಾನು ತಪ್ಪಸೆಗಿದೆ. ನಾನವರನ್ನು ಭೇಟಿಯಾಗಿರುತ್ತಿದ್ದರೆ, ಬಿಜೆಪಿಯು 99 ಸ್ಥಾನಗಳ ಬದಲು 79 ಸ್ಥಾನ ಗಳಿಸುತಿತ್ತು, ಎಂದವರು ಹೇಳಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು  99 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

loader