ಶಿರಡಿ ಸಾಯಿಬಾಬಾ ಮಂದಿರದಲ್ಲಿ ದ್ವಾರಕಾಮಾಯ್ ಮಸೀದಿ ಎಂಬ ನಾಮಫಲಕವನ್ನು ತೆರವುಗೊಳಿಸಿ ಬೇರೆ ನಾಮಫಲಕವನ್ನು ಅಳವಡಿಸಿದ್ದರಿಂದ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿತ್ತು. ಇದರಿಂದ ಮತ್ತೆ ಹಳೆಯ ನಾಮಫಲಕವನ್ನೇ ಅಳವಡಿಸಲಾಗಿದೆ.
ಅಹಮದ್‌ನಗರ: ಇಲ್ಲಿನ ಪ್ರಸಿದ್ಧ ಶಿರಡಿ ಸಾಯಿಬಾಬಾ ಮಂದಿರದಲ್ಲಿ ದ್ವಾರಕಾಮಾಯ್ ಮಸೀದಿ ಎಂಬ ನಾಮಫಲಕವನ್ನು ತೆರವುಗೊಳಿಸಿ, ಅದರ ಜಾಗದಲ್ಲಿ ಹೊಸದಾಗಿ ದ್ವಾರಕಾಮಾಯ್ ಮಂದಿರ ಎಂಬ ಹೊಸ ನಾಮಫಲಕ ಅಳವಡಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಈ ಕ್ರಮದ ವಿರುದ್ಧ ಸ್ಥಳೀಯರು ಮತ್ತು ಮುಸ್ಲಿಂ ಸಮುದಾಯದ ಸದಸ್ಯರು ಭಾರೀ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡರು.
ಇದಕ್ಕೆ ಬೆದರಿದ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಹೊಸ ನಾಮಫಲಕವನ್ನು ತೆರವುಗೊಳಿಸಿದೆ.
