ಅಲ್ಪಸಂಖ್ಯಾತರಿಗಾಗಿ ಕಾಂಗ್ರೆಸ್ ಪಕ್ಷ ಬಲಿದಾನ ಮಾಡಿದೆ. ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು. ಮುಸ್ಲಿಮರು ಕಾಂಗ್ರೆಸ್ ಜೊತೆ ಇರಬೇಕು ಎಂದು ಮೈಸೂರಿನ ಅಲ್ಪಸಂಖ್ಯಾತರ ಕಾಂಗ್ರೆಸ್ ಐಕ್ಯತಾ ಸಮಾವೇಶದಲ್ಲಿ ಪರಮೇಶ್ವರ್ ಹೇಳಿದ್ದಾರೆ.

ಮೈಸೂರು (ನ.30): ಅಲ್ಪಸಂಖ್ಯಾತರಿಗಾಗಿ ಕಾಂಗ್ರೆಸ್ ಪಕ್ಷ ಬಲಿದಾನ ಮಾಡಿದೆ. ಮುಸಲ್ಮಾನರ ರಕ್ತದಲ್ಲಿ ಕಾಂಗ್ರೆಸ್ ಇರಬೇಕು. ಮುಸ್ಲಿಮರು ಕಾಂಗ್ರೆಸ್ ಜೊತೆ ಇರಬೇಕು ಎಂದು ಮೈಸೂರಿನ ಅಲ್ಪಸಂಖ್ಯಾತರ ಕಾಂಗ್ರೆಸ್ ಐಕ್ಯತಾ ಸಮಾವೇಶದಲ್ಲಿ ಪರಮೇಶ್ವರ್ ಹೇಳಿದ್ದಾರೆ.

ಈ ದೇಶದ ಸಂವಿಧಾನವನ್ನ ಬಿಜೆಪಿಯವರು ಬದಲಾಯಿಸಲು ಮುಂದಾಗಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ದೇಶವನ್ನ ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಎಲ್ಲರನ್ನು ಒಂದಾಗಿ ಕಾಣುವ ಮನೋಭಾವನೆ ಬಿಜೆಪಿಯ ನಾಯಕರಿಗೆ ಇಲ್ಲ. ಸ್ವಾತಂತ್ರ್ಯ ಬಂದಾಗ ಬಿಜೆಪಿ ಅಧಿಕಾರದಲ್ಲಿ ಇದ್ದಿದ್ದರೆ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದರು. ದೇಶ ವಿಭಜನೆ ಆಗಿದ್ದು ಸರಿಯಲ್ಲ, ಪಾಕಿಸ್ತಾನ-ಭಾರತ ಒಂದೇ ದೇಶವಾಗಿ ಉಳಿಯಬೇಕಿತ್ತು ಎಂದು ಪರಮೇಶ್ವರ್ ಐಕ್ಯತಾ ಸಮಾವೇಶದಲ್ಲಿ ಹೇಳಿದ್ದಾರೆ.