ಮುಸ್ಲೀಂಮರು ಬಿಜೆಪಿಗೆ ವೋಟ್ ನೀಡದೇ ಇದ್ದರೂ ನಾವು ಅವರಿಗೆ ಮಾನ್ಯತೆ ನೀಡಿದ್ದೇವೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ನವದೆಹಲಿ (ಏ.21):ಮುಸ್ಲೀಂಮರು ಬಿಜೆಪಿಗೆ ವೋಟ್ ನೀಡದೇ ಇದ್ದರೂ ನಾವು ಅವರಿಗೆ ಮಾನ್ಯತೆ ನೀಡಿದ್ದೇವೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಮುಸ್ಲೀಂ ಪ್ರಾಬಲ್ಯವುಳ್ಳ ಸಾಕಷ್ಟು ಹಳ್ಳಿಗಳಿಗೆ ಸಚಿವ ರವಿ ಶಂಕರ್ ಪ್ರಸಾದ್ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಈ ಮಾತನ್ನು ಹೇಳಿದ್ದಾರೆ. ಹೆಚ್ಚಿನ ಮುಸಲ್ಮಾನ ಯುವಕರು ಸರ್ವಿಸ್ ಸೆಂಟರ್ ಗಳತ್ತ ಹೋಗುತ್ತಿದ್ದು, ಇಂಟರ್'ನೆಟ್ ಮೂಲಕ ಜನರಿಗೆ ಸರ್ಕಾರದ ಸೇವೆಗಳು ಲಭ್ಯವಾಗುವಂತೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ.
ನಾವು ದೇಶವನ್ನು ಆಳುತ್ತಿದ್ದೇವೆ. 13 ಮಂದಿ ಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ಸೇವಾಕ್ಷೇತ್ರ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವ ಮುಸ್ಲೀಂ ವ್ಯಕ್ತಿಯನ್ನು ನಾವು ಬಲಿಪಶು ಮಾಡಿದ್ದೇವಾ? ಅವರನ್ನು ಕೆಲಸದಿಂದ ತೆಗೆದು ಹಾಕಿದ್ದೇವಾ? ನಾವು ಮುಸ್ಲೀಂ ಮತವನ್ನು ಪಡೆಯದೇ ಇದ್ದರೂ ನಾವು ಅವರಿಗೆ ಗೌರವವನ್ನು ನೀಡಿದ್ದೇವೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
