Asianet Suvarna News Asianet Suvarna News

ನೆಹರೂ, ಗಾಂಧಿ, ಪಟೇಲ್‌ ಹೇಳಿದ್ದಕ್ಕೆ ಮುಸ್ಲಿಮರು ಭಾರತದಲ್ಲಿ ಉಳಿದ್ರು!

ನೆಹರೂ, ಗಾಂಧಿ, ಪಟೇಲ್‌ ಹೇಳಿದ್ದಕ್ಕೆ ಮುಸ್ಲಿಮರು ಭಾರತದಲ್ಲಿ ಉಳಿದ್ರು| ಪಾಕಿಸ್ತಾನಕ್ಕೆ ಹೋಗದ ಪರಿಣಾಮ ಶಿಕ್ಷೆ ಅನುಭವಿಸುತ್ತಿದ್ದಾರೆ: ಆಜಂ ಖಾನ್

Muslims are being punished for not migrating to Pakistan Azam Khan
Author
Bangalore, First Published Jul 21, 2019, 9:16 AM IST

ನವದೆಹಲಿ[ಜು.21]: ಸಮಾಜವಾದಿ ಪಕ್ಷದ ಸಂಸದ ಆಜಂಖಾನ್‌ ಮತ್ತೆ ವಿವಾದಿತ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ.

1947ರ ಭಾರತ-ಪಾಕಿಸ್ತಾನ ದೇಶಗಳ ಇಬ್ಭಾಗದ ವೇಳೆ ಪಾಕಿಸ್ತಾನಕ್ಕೆ ಹೊರಟುನಿಂತ ಮುಸ್ಲಿಮರನ್ನು ಮೌಲಾನಾ ಅಜಾದ್‌, ಜವಾಹರ್‌ಲಾಲ್‌ ನೆಹರೂ, ಸರ್ದಾರ್‌ ಪಟೇಲ್‌, ಮಹಾತ್ಮಾ ಗಾಂಧೀಜಿ ಪಾಕ್‌ಗೆ ಹೋಗದಂತೆ ಮನವಿ ಮಾಡಿದರು. ಈ ಕಾರಣಕ್ಕಾಗಿ ಮುಸ್ಲಿಮರು ಭಾರತದಲ್ಲೇ ಉಳಿದುಕೊಂಡರು. ಮುಸ್ಲಿಮರು ಭಾರತವನ್ನು ತಮ್ಮ ರಾಷ್ಟ್ರ ಎಂದೇ ಭಾವಿಸಿದರು. ಆದರೆ, ಈ ಭಾವನೆಯೇ ಮುಸ್ಲಿಮರಿಗೆ ಇಂದು ಮುಳುವಾಗಿದೆ. ಈ ರಾಷ್ಟ್ರದಲ್ಲಿ ಅವರು ಘನತೆಯಿಂದ ಬದುಕುವುದು ಕಷ್ಟವಾಗಿದೆ.

ಭಾರತ- ಪಾಕಿಸ್ತಾನ ಇಬ್ಭಾಗದ ದಿನದಿಂದಲೂ ಅಸಹ್ಯಕರ ಜೀವನವನ್ನು ಮುಸ್ಲಿಮರು ಸಾಗಿಸುತ್ತಿದ್ದಾರೆ. ಇದಕ್ಕೆ ನಾವು ನಾಚಿಕೆಪಡಬೇಕು ಎಂದು ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios