ಹೈದರಾಬಾದ್[ಜೂ.25]: ಓರ್ವ ಮುಸ್ಲಿಂ ಯುವಕ ಆದಿವಾಸಿ ಮಹಿಳೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದರೆ ಆತನ ಕತ್ತು ಸೀಳಿ ಹಾಕಿ. ಇಂತಹ ಹೇಳಿಕೆ ನೀಡುವ ಮೂಲಕ ತೆಲ್ಲಂಗಾಣದ ಭಾರತೀಯ ಜನತಾ ಪಾರ್ಟಿಯ ಸಂಸದ ಸೋಯಂ ಬಾಪೂ ರಾವ್ ವಿವಾದಕ್ಕೀಡಾಗಿದ್ದಾರೆ.  

ಸಂಸದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, 'ನಾನು ಮುಸ್ಲಿಂ ಯುವಕರಿಗೆ ಈ ಮಾತನ್ನು ಹೇಳುತ್ತಿದ್ದೇನೆ. ಒಂದು ವೇಳೆ ನೀವು ನಮ್ಮ ಆದಿವಾಸಿ ಯುವತಿಯರನ್ನು ಹಿಂಬಾಲಿಸಿದರೆ ಅಥವಾ ಚುಡಾಯಿಸಿದರೆ ನಿಮ್ಮ ಕತ್ತು ಸೀಳುತ್ತೇವೆ. ಹೀಗಾಗಿ ಆದಿಲಾಬಾದ್ ಜಿಲ್ಲೆಯ ಅಲ್ಪಸಂಖ್ಯಾತ ಯುವಕರಲ್ಲಿ ನಮ್ಮ ಆದಿವಾಸಿ ಮಹಿಳೆಯರಿಂದ ದೂರವಿರಿ ಎಂದು ಆಗ್ರಹಿಸುತ್ತೇನೆ' ಎಂದು ವಾರ್ನಿಂಗ್ ನೀಡಿದ್ದಾರೆ.

ಬಿಜೆಪಿ ಸಂಸದನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಸದ್ಯ ಬಿಜೆಪಿ ಸಂಸದನ ಈ ಹೇಳಿಕೆ ಭಾರೀ ವಿವಾದ ಹುಟ್ಟು ಹಾಕಿದೆ. ಇಲ್ಲಿನ ಅಲ್ಪಸಂಖ್ಯಾತ ಸಮುದಾಯದ ನಾಯಕರೆಲ್ಲಾ ಸೇರಿ ಸಂಸದರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆ.