ವಾರಣಾಸಿ[ನ. 18]  ಫೀರೋಜ್ ಖಾನ್ ತನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.  ತನ್ನ ತಾತ ಗಫೂರ್ ಖಾನ್ ರಾಜಸ್ಥಾನಿ ಭಜನೆಗಳನ್ನು ಹಿಂದೂ ಸಂಪ್ರದಾಯದ ಆಚರಣೆಯಲ್ಲಿ ಹಾಡುವುದನ್ನು ನೆನಪು ಮಾಡಿಕೊಳ್ಳುತ್ತದೆ. ಈ ಸಂಪ್ರದಾಯ ಹಾಗೆ ಮುಂದುವರಿಯಿತು. ತಾತನ ನಂತರ ಅವರ ಮಗ ಅಂದರೆ ನನ್ನ ಅಪ್ಪ ರಂಜಾನ್ ಖಾನ್ ಸಂಸ್ಕೃತ ಅಧ್ಯಯನ ಮಾಡಿ ಜೈಪುರದ ಬಗ್ರು ಹಳ್ಳಿಯ ಸಮೀಪ ತನ್ನ ಮನೆಯ ಸುತ್ತಲೂ ಒಂದಾಗುವ ಹಿಂದೂಗಳ ಸಮುದಾಯಕ್ಕೆ ಪ್ರವಚನ ನೀಡುವುದನ್ನು ಆರಂಭಿಸಿದ್ದರು.

ಆವಾಗ ನಮಗೆ ಯಾವ ಸಮಸ್ಯೆಗಳು ಇರಲಿಲ್ಲ. ಆದರೆ ಯಾವಾಗ  ನಾನು ಬನಾರಸ್ ಹಿಂದೂ ವಿವಿಗೆ ಪ್ರೋಫೆಸರ್ ಆಗಿ ಆಗಮಿಸಿದೆನೋ ಸಮಸ್ಯೆ ಆರಂಭವಾಯಿತು. ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ಸೊಲ್ಲೆತ್ತಿದರು. ಮುಸ್ಲಿಂ ಒಬ್ಬ ಸಂಸ್ಕೃತ ಕಲಿಸಲು ಸಾಧ್ಯವಿಲ್ಲ ಎಂದರು. ಇದಾದ ಮೇಲೆ ನವೆಂಬರ್ 7 ರಂದು ಪ್ರತಿಭಟನೆಯನ್ನು ಮಾಡಿದರು. ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಆಶಯಗಳಿಗೆ ಇದು ವಿರುದ್ಧ ಎಂಬ ಕೂಗು ಹೆಚ್ಚು ಮಾಡಿದರು.

ಈ ಗೊಂದಲ ಮುಂದುವರಿದೇ ಇತ್ತು. ಖಾನ್ ಅವರನ್ನು ಬೇರೆ ವಿಭಾಗಕ್ಕೆ ಕಳಿಸಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದೇ ಇದ್ದರು. ವೈಸ್-ಛಾನ್ಸಲರ್ ರಾಕೇಶ್ ಭಟ್ನಾಗರ್ ಜತೆ ಮತ್ತು ಉಳಿದ ಸಿಬ್ಬಂದಿ ಜತೆ ಈ ವಿಚಾರವಾಗಿ ಸಭೆ ಸಹ ಮಾಡಲಾಯಿತು. ಖಾನ್ ಅವರನ್ನು ಅವರ ಅಧ್ಯಯನ, ಡಿಗ್ರಿ ಮತ್ತು ಯುಜಿಸಿ ನಿರ್ದೇಶನದ ಆಧಾರದಲ್ಲಿ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಅಂಶವನ್ನು ಆಡಳಿತ ಮಂಡಳಿ ಹೇಳಿತು.

ಆದರೆ ವಿಶ್ವವಿದ್ಯಾನಿಲಯ ಮಾತ್ರ ಮುಸ್ಲಿಂ ಪ್ರೊಫೆಸರ್ ಪರವಾಗಿ ನಿಂತಿದೆ. ಈ ಬಗ್ಗೆ ಮತ್ತಷ್ಟು ಗೊಂದಲ ಉಂಟಾದರೆ ಕಾನೂನು ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುನಿವರ್ಸಿಟಿಯ ವಕ್ತಾರ ರಾಜೇಶ್ ಸಿಂಗ್, ಯಾರೂ ಏನೇ ಹೇಳಲಿ, ಈ ಪೋಸ್ಟ್ ಗೆ ಖಾನ್ ಗಿಂತ ಅತ್ಯುತ್ತಮ ವ್ಯಕ್ತಿ ಸಿಗಲು ಸಾಧ್ಯವೇ ಇಲ್ಲ. ತರಬೇತಿ ಅಥವಾ ಶಿಕ್ಷಣ ನೀಡುವಲ್ಲಿ ಜಾತಿ-ಮತ-ಲಿಂಗಗಳ ತಾರತಮ್ಯ ಇಲ್ಲ. ನಾವು ಕಾನೂನು ಸಲಹೆ ಪಡೆದುಕೊಂಡು ಮುಂದೆ ಹೆಜ್ಜೆ ಇಡುತ್ತೇವೆ ಎಂದು ತಿಳಿಸಿದ್ದಾರೆ.