ಕರಾವಳಿ ಅಂದರೆ ನೆನಪಾಗೋದು ಅಲ್ಲಿನ ಕೋಮು ಗಲಭೆಗಳು ಇತ್ತೀಚೆಗೆ ನಡೆದ ಕಲ್ಲಡ್ಕ ಗಲಭೆಯೇ ಅದಕ್ಕೆ ಸಾಕ್ಷಿ. ಆದರೆ, ಈ ಕೋಮುಗಲಭೆಯ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ ಎನ್ನುವುದಕ್ಕೆ ಹತ್ತಾರು ಉದಾಹರಣೆಗಳು ಸಿಕ್ಕಿದೆ. ಜಾತಿಯ ವಿಷ ಬೀಜ ಬಿತ್ತಿ ಕರಾವಳಿ ಸಾಮರಸ್ಯ ಕದಡುತ್ತಿರುವವರಿಗೆ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ ತಕ್ಕ ಉತ್ತರ ನೀಡಿದೆ.

ಮಂಗಳೂರು(ಆ.11): ದಿನ ಬೆಳಗಾದರೆ ಒಂದೇ ಗಲ್ಲಿಯ ಎರಡು ಪಂಗಡಗಳು ಸದಾ ಕತ್ತಿ ಮಸೆಯುವಂತಹ ಪರಿಸ್ಥಿತಿ ಕರಾವಳಿಯದ್ದು. ದಕ್ಷಿಣ ಕನ್ನಡ ಅಂದರೆ ಹಿಂದೂ ಮುಸ್ಲಿಂ ರಕ್ತಪಾತಕ್ಕೆ ಜನ್ಮಸ್ಥಳ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಕಳೆದ ಕೆಲ ಮೂರ್ನಾಲ್ಕು ವರ್ಷಗಳಲ್ಲಿ ನಡೆದ ಹಿಂದೂ ಹಾಗೂ ಮುಸ್ಲಿಂ ಎರಡೂ ಸಮುದಾಯದ ನಾಯಕರ ಕಗ್ಗೊಲೆಗಳು.

ಹಿಂದೂ ಮುಸ್ಲಿಂ ಭಾಯಿ ಭಾಯಿ ರೀತಿ ಇರಲು ಸಾಧ್ಯವಿಲ್ಲವೇ?

ಹೌದು, ಇಂತಹ ಹಲವು ಪ್ರಶ್ನೆಗಳನ್ನ ವೇದಿಕೆ ಮೇಲೆ ನಿಂತು ಕೇಳಲು ಸಾಧ್ಯವಾದಿದ್ದರೂ ಕರಾವಳಿಯನ್ನ ನಿಂತು ನೋಡಿದ ಪ್ರತಿಯೊಬ್ಬರಲ್ಲೂ ಹುಟ್ಟುವ ಪ್ರಶ್ನೆ ಇದೆ. ಆದರೆ, ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಇಡೀ ಕರಾವಳಿಯ ಚಿತ್ರಣವೇ ಬದಲಾದಂತಿದೆ. ಆ ಬದಲಾವಣೆಗೆ ಕಾರಣವಾಗಿರೋದೆ ಈ ಸಭೆ.

ಸಾಮರಸ್ಯಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿದ ಮುಖಂಡರು: ಕರಾವಳಿಯ ಭ್ರಾತೃತ್ವವೇ ಸಭೆಯ ಮೂಲ ಗುರಿ

ಇದು ಮಂಗಳೂರಿನ ಬೋಳಿಯಾರು ಸಭಾಂಗಣದಲ್ಲಿ ನಡೆದ ಬಿಜೆಪಿ ಅಲ್ಪಂಸಂಖ್ಯಾತ ಮೋರ್ಚಾ ವತಿಯಿಂದ ಮುಸ್ಲಿಂ ಧಾರ್ಮಿಕ ಗುರುಗಳ ಸಭೆ. ಈ ಸಭೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರಣ.. ಬಿಜೆಪಿ ಪಕ್ಷದ ಸಭೆಯಲ್ಲಿ 100ಕ್ಕೂ ಅಧಿಕ ಮುಸ್ಲಿಂ ಧಾರ್ಮಿಕ ಮುಖಂಡರುಗಳು ಭಾಗಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಇಂಥದ್ದೊಂದು ವೇದಿಕೆಯನ್ನ ಖುದ್ದು ಮುಸ್ಲಿಂ ಧಾರ್ಮಿಕ ಮುಖಂಡರೇ ಕಲ್ಪಿಸಿಕೊಟ್ಟಿದ್ದಾರೆ.

ಬಿಜೆಪಿ ಪಕ್ಷ ಧಾರ್ಮಿಕ ಮುಖಂಡರುಗಳನ್ನು ಚುನಾವಣೆಗೆ ನಿಲ್ಲಿಸಿ ಜನಪ್ರತಿನಿಧಿಯಾಗಲು ಆಹ್ವಾನಿಸುತ್ತಿದೆ. ಆ ಮೂಲಕ ಅಲ್ಪಸಂಖ್ಯಾತ ಜನಾಂಗವನ್ನೂ ಪ್ರಬಲ ಶಕ್ತಿಯಾಗಿ ಬೆಳೆಯಲು ಮುಕ್ತ ವೇದಿಕೆಯನ್ನ ಕಲ್ಪಿಸುತ್ತಿದೆ. ಬಿಜೆಪಿಯ ಈ ದೂರದೃಷ್ಟಿಯೇ ಪಕ್ಷದ ಮೇಲೆ ಅಲ್ಪಸಂಖ್ಯಾತ ಪಂಗಡಗಳು ನಂಬಿಕೆ ಇಡಲು ಸಹಕಾರಿಯಾಗಿದೆ.

ಇದುವರೆಗೆ ಅತ್ಯಂತ ಗುಪ್ತವಾಗಿ ಬಿಜೆಪಿ ಪರ ಕಾರ್ಯ ನಿರ್ವಹಿಸುತ್ತಿದ್ದ ಆರ್.ಎಸ್.ಎಸ್ ಮುಸ್ಲಿಂ ವಿಂಗ್'ನ ಮುಸ್ಲಿಂ ರಾಷ್ಟ್ರೀಯ ಮಂಚ್'ನಲ್ಲಿನ ಮುಸ್ಲಿಂ ಧರ್ಮಗುರುಗಳು ಬಹಿರಂಗವಾಗಿ ಸಭೆಯಲ್ಲಿ ಪಾಲ್ಗೊಂಡು ಪಕ್ಷ ನಿಷ್ಠೆ ಪ್ರದರ್ಶಸಿ ತಮ್ಮನ್ನು ತಾವೇ ಜನರ ಮುಂದೆ ಅನಾವರಣಗೊಳಿಸಿಕೊಂಡರು. ಇದು ಕರಾವಳಿಯ ರಕ್ತಸಿಕ್ತ ಅಧ್ಯಯಕ್ಕೆ ಇತಿಶ್ರೀಯ ಮುನ್ನುಡಿ ಅಂದ್ರೂ ತಪ್ಪಲ್ಲ.