Asianet Suvarna News Asianet Suvarna News

ಕಲಾಂ ಮುಸ್ಲಿಂ ವ್ಯಕ್ತಿಯೇ ಅಲ್ಲ: ಮುಸ್ಲಿಂ ಸಂಘಟನೆ ವಿವಾದ

ವಿಜ್ಞಾನಿಗಳ ಗುಂಪಿನಲ್ಲಿ ಕಲಾಂ ಅವರೊಬ್ಬ ಸಾಮಾನ್ಯ ವಿಜ್ಞಾನಿಯಷ್ಟೇ. ಬಿಜೆಪಿ ಮತ್ತು ಸಂಘಪರಿವಾರ ಕಲಾಂ ಅವರನ್ನು ಗುರುತಿಸಿತು. ಶಂಕರಾಚಾರ್ಯರಿಂದ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಅಥವಾ ಮೂರ್ತಿಪೂಜೆಗೆ ಕಲಾಂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಕಲಾಂ ಅವರು ಕೇವಲ ಮುಸ್ಲಿಂ ಹೆಸರನ್ನಷ್ಟೇ ಹೊಂದಿದ್ದಾರೆ. ಹೀಗಾಗಿ ಸ್ಮಾರಕದಲ್ಲಿ ಕುರಾನ್ ಅನ್ನು ಇಡದೇ ಇರುವುದಕ್ಕೆ ನಾವು ಪ್ರತಿಭಟಿಸುವುದಿಲ್ಲ ಎಂದು ಹೇಳಿದ್ದಾರೆ.

muslim organization says abdul kalam was not a muslim

ಚೆನ್ನೈ: ರಾಮೇಶ್ವರದಲ್ಲಿರುವ ಅಬ್ದುಲ್ ಕಲಾಂ ಸ್ಮಾರಕದಲ್ಲಿ ಪ್ರತಿಮೆಯ ಮುಂದೆ ಭಗವದ್ಗೀತೆಯನ್ನು ಇಟ್ಟಿದ್ದ ವಿವಾದ ತಣ್ಣಗಾಗುವ ಮುನ್ನವೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಮುಸ್ಲಿಂ ಪರ ಗುಂಪೊಂದು ಅಬ್ದುಲ್ ಕಲಾಂ ಮುಸ್ಲಿಂ ವ್ಯಕ್ತಿಯೇ ಅಲ್ಲ ಎಂಬ ಆಘಾತಕಾರಿ ಹೇಳಿಕೆ ನೀಡಿದೆ.

ತಮಿಳುನಾಡು ತೌಹೀದ್ ಜಮಾತ್ ಸಂಘಟನೆಯ ಮುಖಂಡ ಜೈನಲಬ್ಬೀನ್, ಕಲಾಂ ಅವರೊಬ್ಬ ಮುಸ್ಲಿಂ ಅಲ್ಲ. ನಗ್ನ ಸನ್ಯಾಸಿಗಳಿಗೆ ಮತ್ತು ಮೂರ್ತಿಗಳಿಗೆ ಅವರು ಪೂಜೆ ಮಾಡುತ್ತಿದ್ದರು. ರಾಷ್ಟ್ರಪತಿಯಾಗುವುದಕ್ಕೂ ಮುನ್ನ ಕಲಾಂ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿರಲಿಲ್ಲ. ವಿಜ್ಞಾನಿಗಳ ಗುಂಪಿನಲ್ಲಿ ಕಲಾಂ ಅವರೊಬ್ಬ ಸಾಮಾನ್ಯ ವಿಜ್ಞಾನಿಯಷ್ಟೇ. ಬಿಜೆಪಿ ಮತ್ತು ಸಂಘಪರಿವಾರ ಕಲಾಂ ಅವರನ್ನು ಗುರುತಿಸಿತು. ಶಂಕರಾಚಾರ್ಯರಿಂದ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಅಥವಾ ಮೂರ್ತಿಪೂಜೆಗೆ ಕಲಾಂ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಕಲಾಂ ಅವರು ಕೇವಲ ಮುಸ್ಲಿಂ ಹೆಸರನ್ನಷ್ಟೇ ಹೊಂದಿದ್ದಾರೆ. ಹೀಗಾಗಿ ಸ್ಮಾರಕದಲ್ಲಿ ಕುರಾನ್ ಅನ್ನು ಇಡದೇ ಇರುವುದಕ್ಕೆ ನಾವು ಪ್ರತಿಭಟಿಸುವುದಿಲ್ಲ ಎಂದು ಹೇಳಿದ್ದಾರೆ.

epaperkannadaprabha.com

Follow Us:
Download App:
  • android
  • ios