Asianet Suvarna News Asianet Suvarna News

ಚಿದಂಬರಂ ಮುಖಕ್ಕೆ ಮಸಿ ಬಳಿದ್ರೆ ಭರ್ಜರಿ ಕ್ಯಾಶ್ ಪ್ರೈಸ್, ಮುಸ್ಲಿಂ ನಾಯಕ ಘೋಷಣೆ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾಡನ ನೀಢಿದ್ದ ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಮುಖಕ್ಕೆ ಮಸಿ ಬಳಿದವರಿಗೆ ಬಹುಮಾನ! ಹೌದು ಚಿದಂಬರಂ ಮುಖಕ್ಕೆ ಮಸಿ ಬಳಿಯುವವರಿಗೆ ಬಹುಮಾನ ನೀಡಲಾಗುವುದು ಎಂದು ಮುಸ್ಲಿಂ ನಾಯಕರೊಬ್ಬರು ಘೋಷಣೆ ಮಾಡಿದ್ದಾರೆ.

Muslim leader offers cash reward for blackening P Chidambaram face
Author
Bengaluru, First Published Aug 13, 2019, 8:07 PM IST
  • Facebook
  • Twitter
  • Whatsapp

ಅಲಿಘಡ]ಆ. 13]  ಆರ್ಟಿಕಲ್ 370 ರದ್ದು ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸುದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮುಖಕ್ಕೆ ಮಸಿ ಬಳಿಯುವವರಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಅಲಿಘಡದ ಮುಸ್ಲಿಂ ಯುತ್ ಅಸೋಸಿಯೇಷನ್ ಮುಖ್ಯಸ್ಥ ಮೊಹಮದ್ ಅಮೀರ್ ರಶೀದ್  21 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದಿದ್ದಾರೆ.

ಚಿದಂಬರಂ ಹೇಳಿಕೆ ಹಿಂದೂ ಮತ್ತು ಮುಸ್ಲಿಮರ ನಡುವಿನ ಸಾಮರಸ್ಯಕ್ಕೆ ಧಕ್ಕೆ ತಂದಿದೆ. ಈದ್ ಹಬ್ಬದ ಕೊಡುಗೆ ಎನ್ನುವ ರೀತಿ ಚಿದಂಬರಂ ಮುಖಕ್ಕೆ ಮಸಿ ಬಳಿಯುವವರಿಗೆ ಬಹುಮಾನ ನೀಡಲಾಗುತ್ತದೆ ಎಂದಿದ್ದಾರೆ.

ಕಣಿವೆಯಲ್ಲಿ ಹಾರಾಡುತ್ತಿದೆ ಭದ್ರತಾ ಹಕ್ಕಿ: ಧೋವಲ್ ಕಂಡ ಸ್ಥಳೀಯರು ಕಕ್ಕಾಬಿಕ್ಕಿ!

ಒಂದು ವೇಳೆ ಕಾಶ್ಮೀರ ಹಿಂದೂಗಳು ಬಹುಸಂಖ್ಯಾತರಾಗಿರುವ ಪ್ರದೇಶ ಆಗಿದ್ದರೆ ಕೇಂದ್ರ ಸರ್ಕಾರ  ಆರ್ಟಿಕಲ್ 370ರ ವಿಚಾರಕ್ಕೆ ಹೋಗುತ್ತಿರಲಿಲ್ಲ ಎಂದು ಚಿದಂಬರಂ ನೀಡಿದ್ದ ಹೇಳಿಕೆ ವಿವಾದ ಎಬ್ಬಿಸಿತ್ತು.

ಇದೇ ಸುದ್ದಿಯನ್ನು ಇಂಗ್ಲಿಷ್ ನಲ್ಲಿ ಓದಲು ಕ್ಲಿಕ್ ಮಾಡಿ

 

Follow Us:
Download App:
  • android
  • ios