ವರಿಬ್ಬರೂ ಮುಸ್ಲಿಂ ಸಮುದಾಯದವರು, ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು ಆದರೂ ಇವರ ವಿವಾಹವಾದದ್ದು ಶಿವ ದೇಗುಲದಲ್ಲಿ. ಇಂತಹ ವಿಚಿತ್ರ ಘಟನೆ ನಡೆದದ್ದು ಬಿಹಾರದ ಸಪೌಲ್ ಜಿಲ್ಲೆಯ ಭೀಮನಗರ ಎಂಬ ಗ್ರಾಮದಲ್ಲಿ. ಇಲ್ಲಿನ ಮೊಹಮ್ಮದ್ ಸೊಹಾನ್ ಹಾಗೂ ನೌರೇಶಾ ಖಾತುನ್ ಒಬ್ಬರನ್ನೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಇವರಿಬ್ಬರು ಒಂದೇ ಧರ್ಮದವರಾಗಿದ್ದರೂ ಮನೆಯವರು ಮಾತ್ರ ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ಪ್ರೇಮಿಗಳು ಬೇರೆ ವಿಧಿ ಇಲ್ಲದೆ ದಸರಾ ಆಚರಣೆಯ ವೇಳೆ ಮನೆಯಿಂದ ಓಡಿಹೋಗಿದ್ದರು. ಮನೆಯವರು ಹುಡುಕಾಟ ನಡೆಸಿದಾಗ ಈ ಪ್ರೇಮಿಗಳು ದಿಲ್ಲಿಯಲ್ಲಿ ಪತ್ತೆಯಾಗಿದ್ದು, ಮನೆಗೆ ಕರೆ ತಂದಿದ್ದರು. ಈ ಘಟನೆಯ ಬಳಿಕ ಪಂಚಾಯಿತಿ ಕರೆದಿದ್ದು, ಅಲ್ಲಿ ನಡೆದ ಚರ್ಚೆಯಲ್ಲಿ ಇವರಿಬ್ಬರಿಗೂ ಮದುವೆ ಮಾಡಿಸಬೇಕೆಂಬ ತೀರ್ಪು ನೀಡಲಾಗಿತ್ತು.
ಬಿಹಾರ(ಅ.31): ಇವರಿಬ್ಬರೂ ಮುಸ್ಲಿಂ ಸಮುದಾಯದವರು, ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು ಆದರೂ ಇವರ ವಿವಾಹವಾದದ್ದು ಶಿವ ದೇಗುಲದಲ್ಲಿ. ಹೀಗ್ಯಾಕೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಇಂತಹ ವಿಚಿತ್ರ ಘಟನೆ ನಡೆದದ್ದು ಬಿಹಾರದ ಸಪೌಲ್ ಜಿಲ್ಲೆಯ ಭೀಮನಗರ ಎಂಬ ಗ್ರಾಮದಲ್ಲಿ. ಇಲ್ಲಿನ ಮೊಹಮ್ಮದ್ ಸೊಹಾನ್ ಹಾಗೂ ನೌರೇಶಾ ಖಾತುನ್ ಒಬ್ಬರನ್ನೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಇವರಿಬ್ಬರು ಒಂದೇ ಧರ್ಮದವರಾಗಿದ್ದರೂ ಮನೆಯವರು ಮಾತ್ರ ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ಪ್ರೇಮಿಗಳು ಬೇರೆ ವಿಧಿ ಇಲ್ಲದೆ ದಸರಾ ಆಚರಣೆಯ ವೇಳೆ ಮನೆಯಿಂದ ಓಡಿಹೋಗಿದ್ದರು.
ಮನೆಯವರು ಹುಡುಕಾಟ ನಡೆಸಿದಾಗ ಈ ಪ್ರೇಮಿಗಳು ದಿಲ್ಲಿಯಲ್ಲಿ ಪತ್ತೆಯಾಗಿದ್ದು, ಮನೆಗೆ ಕರೆ ತಂದಿದ್ದರು. ಈ ಘಟನೆಯ ಬಳಿಕ ಪಂಚಾಯಿತಿ ಕರೆದಿದ್ದು, ಅಲ್ಲಿ ನಡೆದ ಚರ್ಚೆಯಲ್ಲಿ ಇವರಿಬ್ಬರಿಗೂ ಮದುವೆ ಮಾಡಿಸಬೇಕೆಂಬ ತೀರ್ಪು ನೀಡಲಾಗಿತ್ತು. ಹೀಗಾಗಿ ಹಿಂದೂ-ಮುಸ್ಲಿಂ ಸಮುದಾಯದ ಹಿರಿಯರು ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಗ್ರಾಮದ ಶಿವ ದೇವಾಲಯದಲ್ಲಿ ಇವರಿಬ್ಬರ ಮದುವೆ ನೆರವೇರಿಸಲಾಗಿದೆ. ಎರಡೂ ಧರ್ಮದವರು ಈ ನವ ದಂಪತಿಯನ್ನು ಹಾರೈಸಿದ್ದಾರೆ.

