ಮೃತ ಬ್ರಾಹ್ಮಣನ ಅಂತ್ಯ ಸಂಸ್ಕಾರಕ್ಕಾಗಿ ಧೋತಿ-ಜನಿವಾರ ಧರಿಸಿದ ಮುಸ್ಲಿಂ ಸಹೋದರರು!

ಧರ್ಮ ಬದಿಗಿಟ್ಟು ಮಾನವೀಯತೆ ಮೆರೆದ ಮುಸ್ಲಿಂ ಸಹೋದರರು| ತಂದೆಯ ಬ್ರಾಹ್ಮಣ ಸ್ನೇಹಿತ, ಪ್ರೀತಿಯ ಅಂಕಲ್‌ ಅಂತ್ಯಕ್ರಿಯೆಗಾಗಿ ಜನಿವಾರ, ಧೋತಿ ಧರಿಸಿದ ಮೂವರು ಸಹಲೋದರರು| ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ ಖುರೇಷಿ ಕುಟುಂಬ

Muslim brothers give Brahman a Hindu cremation with full ceremony in Gujarat

ಅಹಮದಾಬಾದ್[ಸೆ.16]: ಗುಜರಾತ್ ನಲ್ಲಿ ಮೂವರು ಮುಸ್ಲಿಂ ಸಹೋದರರು ತೋರಿಸಿದ ಧರ್ಮ ಸಾಮರಸ್ಯ ಇಡೀ ಜಿಲ್ಲೆಯ್ನನೇ ಅಚ್ಚರಿಗೀಡು ಮಾಡಿದೆ. ಇಲ್ಲಿನ ಮುಸ್ಲಿಂ ಸಹೋದರರು ತಮ್ಮ ತಂದೆಯ ಬ್ರಾಹ್ಮಣ ಗೆಳೆಯನ ಅಂತಿಮ ಸಂಸ್ಕಾರವನ್ನು ಶಾಸ್ತ್ರೋಕ್ತವಗಿ ನೆರವೇರಿಸಿದ್ದಾರೆ. ತಂದೆಯ ಗೆಳೆಯನಿಗಾಗಿ, ಪ್ರೀತಿಯ ಅಂಕಲ್ ಗಾಗಿ ಏನನ್ನೂ ಯೋಚಿಸದ ಸಹೋದರರು ಜನಿವಾರ, ಧೋತಿ ಧರಿಸಿ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ. 

ಅಮರೇಲಿ ಜಿಲ್ಲೆಯ ಸೌರಕುಂಡಲದ ಭಾನು ಶಂಕರ್ ಕಳೆದ ಕೆಲ ವರ್ಷಗಳಿಂದ ಅಬೂ, ನಾಸಿರ್ ಹಾಗು ಜುಬೈರ್ ಜೊತೆಗಿದ್ದರು. ಈ ಮೂವರು ಸಹೋದರರು ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ತಪ್ಪದೇ ನಮಾಜ್ ಮಾಡುವ ಇವರು, ರಂಜಾನ್ ವೇಳೆ ಉಪವಾಸ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. ಆದರೆ ತಮ್ಮೊಂದಿಗೆ ಇದ್ದ ಪಾಂಡ್ಯಾ ಅಂಕಲ್ ಸಾವನ್ನಪ್ಪಿದಾಗ ಧರ್ಮವನ್ನು ಬದಿಗೊತ್ತಿ ಮಾನವೀಯತೆಗೆ ಬೆಲೆ ಕೊಟ್ಟ ಈ ಸಹೋದರರು ಜನಿವಾರ, ಧೋತಿ ಧರಿಸಿ ಸಂಪದ್ರದಯದಂತೆ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

ಕೊನೆಯ ಕ್ಷಣದಲ್ಲಿ ಗಂಗಾಜಲವನ್ನೂ ಕುಡಿಸಿದ್ದರು

ಈ ಕುರಿತಾಗಿ ಕಪ್ರತಿಕ್ರಿಯಿಸಿರುವ ಜುಬೈರ್ 'ಭಾನುಶಂಕರ್ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದಾಗ ನಾವು ಹತ್ತಿರದಲ್ಲಿದ್ದ ಹಿಂದೂಗಳ ಮನೆಯಿಂದ ಗಂಗಾಜಲ ತಂದು ನೀಡಿದೆವು. ವರ ಅಂತಿಮ ಸಂಸ್ಕಾರ ಬ್ರಾಹ್ಮಣ ಸಂಪ್ರದಾಯದಂತೆ ನಡೆಸಲು ಇಚ್ಛಿಸುತ್ತೇವೆ ಎಂದು ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿದಾಗ, ಮೃತದೇಹವನ್ನು ಎತ್ತಲು ಜನಿವಾರ ಧರಿಸುವುದು ಕಡ್ಡಾಯ ಎಂದರು. ನಾವು ಅದಕ್ಕೆ ಒಪ್ಪಿಕೊಂಡೆವು' ಎಂದಿದ್ದಾರೆ.

ಭಾನುಶಂಕರ್ ಮೃತದೇಹಕ್ಕೆ ನಸೀರ್ ಪುತ್ರ ಅರ್ಮಾನ್ ಸಗ್ನಿಸ್ಪರ್ಶ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ನಸೀರ್ 'ನಾವು 12ನೇ ದಿನ ಸರ್ಮಾನ್ ಕೇಶಮುಂಡನವನ್ನೂ ಮಾಡುತ್ತೇವೆ. ಹಿಂದೂ ಧರ್ಮದಲ್ಲಿ ಹೀಗೆ ಮಾಡುತ್ತಾರೆ' ಎಂದಿದ್ದಾರೆ.

ಕುಟುಂಬ ಸದಸ್ಯರಂತಿದ್ದರು...

ಮೂವರು ಸಹೋದರರ ತಂದೆ ಭೀಕೂ ಖುರೇಷಿ ಹಾಗೂ ಪಾಂಡ್ಯಾಗೆ 40 ವರ್ಷಗಳ ಹಿಂದೆ ಪರಸ್ಪರ ಪರಿಚಯವಾಗಿತ್ತು. ಆದರೆ ಖುರೇಷಿ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಇದರಿಂದ ಪಾಂಡ್ಯಾ ತೀವ್ರ ನೊಂದಿದ್ದರು. ಈ ಕುರಿತಾಗಿ ಮಾಹಿತಿ ನೀಡಿದ ಅಬು 'ಭಾನು ಅಂಕಲ್ ಮದುವೆಯಗಿರಲಿಲ್ಲ, ಕುಟುಂಬಸ್ಥರಿರಲಿಲ್ಲ. ಹೀಗಾಗಿ ಹಲವರು ವರ್ಷಗಳ ಹಿಂದೆ ಅವರು ಕಾಲು ಮುರಿದುಕೊಂಡಾಗ ನನ್ನ ತಂದೆ ನಮ್ಮೊಂದಿಗೆ ಇರುವಂತೆ ಒತ್ತಾಯಿಸಿದ್ದರು. ಅಂದಿನಿಂದ ಅವರು ನಮ್ಮ ಕುಟುಂಬ ಸದಸ್ಯರಂತಿದ್ದರು' ಎಂದಿದ್ದಾರೆ.

ಎಲ್ಲಾ ರೀತಿ ಒಪ್ಪಿಕೊಂಡಿದ್ದರು

ಪಾಂಡ್ಯಾ ಕುರಿತಾಗಿ ಮಾತನಾಡಿದ ನಾಸಿರ್ 'ನನ್ನ ಮಕ್ಕಳು ಕೂಡಾ ಅವರನ್ನು ಅಜ್ಜ ಎಂದೇ ಕರೆಯುತ್ತಿದ್ದರು ಹಾಗೂ ಹೆಂಡತಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿದ್ದಳು. ಅಂಕಲ್ ಖುಷಿ ಖುಷಿಯಾಗಿ ಈದ್ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೂ ಮಕ್ಕಳಿಗೆ ಉಡುಗೊರೆ ತರಲು ಮರೆಯುತ್ತಿರಲಿಲ್ಲ' ಎಮದಿದ್ದಾರೆ. 

ಭಾನು ಕೊನೆಯುಸಿರೆಳೆಯುವವರೆಗೂ, ಖುರೇಷಿ ಕುಟುಂಬ ಅವರಿಗಾಗಿ ಸಸ್ಯಹಾರಿ ಆಹಾರವನ್ನು ತಯಾರಿಸುತ್ತಿತ್ತು. ಇನ್ನು ಈ ಮುಸ್ಲಿಂ ಸಹೋದರ ನಡೆಯನ್ನು ಮೆಚ್ಚಿಕೊಂಡ ಅಮರೇಲಿ ಜಿಲ್ಲೆಯ ಬ್ರಹ್ಮ ಸಮಾಜದ ಉಪಾಧ್ಯಕ್ಷ ಪರಾಗ್ ತ್ರಿವೇದಿ ಮಾತನಾಡುತ್ತಾ 'ಭಾನುಶಂಕರ್ ಅಂತಿಮ ಕ್ರಿಯೆಯನ್ನು ಹಿಂದೂ ಧರ್ಮದ ಅನ್ವಯ ನಡೆಸಿ ಈ ಮುಸ್ಲಿಂ ಸಹೋದರರು ಧಾರ್ಮಿಕ ಸೌಹಾರ್ದತೆಯನ್ನು ಮೆರೆದಿದ್ದಾರೆ' ಎಂದಿದ್ದಾರೆ

Latest Videos
Follow Us:
Download App:
  • android
  • ios