ಹಿಜಾಬ್ ಧರಿಸಿದ್ದರು ಎನ್ನುವ ಕಾರಣಕ್ಕೆ ಮುಸ್ಲೀಂ ಮಹಿಳೆಯೊಬ್ಬಳನ್ನು ಬ್ಯಾಂಕ್'ನಿಂದ ಹೊರಗಟ್ಟಿದ ಘಟನೆ ವಾಷ್ಟಿಂಗ್ಟನ್'ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಒಂದು ವೇಳೆ  ಹಿಜಾಬನ್ನು ತೆಗೆಯದಿದ್ದರೆ ಪೊಲೀಸರನ್ನು ಕರೆಯುವುದಾಗಿ ಬ್ಯಾಂಕ್ ಸಿಬ್ಬಂದಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ.

ನ್ಯೂಯಾರ್ಕ್ (ಮೇ.14): ಹಿಜಾಬ್ ಧರಿಸಿದ್ದರು ಎನ್ನುವ ಕಾರಣಕ್ಕೆ ಮುಸ್ಲೀಂ ಮಹಿಳೆಯೊಬ್ಬಳನ್ನು ಬ್ಯಾಂಕ್'ನಿಂದ ಹೊರಗಟ್ಟಿದ ಘಟನೆ ವಾಷ್ಟಿಂಗ್ಟನ್'ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಒಂದು ವೇಳೆ ಹಿಜಾಬನ್ನು ತೆಗೆಯದಿದ್ದರೆ ಪೊಲೀಸರನ್ನು ಕರೆಯುವುದಾಗಿ ಬ್ಯಾಂಕ್ ಸಿಬ್ಬಂದಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ.

ಜಮೀಲಾ ಮೊಹಮ್ಮದ್ ಎನ್ನುವ ಮಹಿಳೆ ಕಾರ್ ಪೇಮೆಂಟ್ ಮಾಡಲು ವಾಷಿಂಗ್ಟನ್’ನಲ್ಲಿರುವ ಸೌತ್ ಕ್ರೆಡಿಟ್ ಯೂನಿಯನ್ ಬ್ಯಾಂಕ್'ಗೆ ತೆರಳಿದ ವೇಳೆ ಈ ಘಟನೆ ನಡೆದಿದೆ.

ಜಮೀಲಾ ಮಹಮ್ಮದ್ ಅಮೇರಿಕಾದವರಾಗಿದ್ದು ಕ್ರೆಡಿಟ್ ಯೂನಿಯನ್ ನ ಸದಸ್ಯರೂ ಕೂಡಾ ಆಗಿದ್ದಾರೆ. ಇಡೀ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಶುಕ್ರವಾರ ಮುಸ್ಲೀಮರಿಗೆ ವಿಶೇಷ ದಿನವಾದ್ದರಿಂದ ಜಮೀಲಾರವರು ಸ್ವೆಟರ್ ಹಾಗೂ ತಲೆಗೆ ಸ್ಕಾರ್ಫ್ ಧರಿಸಿ ಬಂದಿದ್ದರು. ಕ್ರೆಡಿಟ್ ಯೂನಿಯನ್ ಬ್ಯಾಂಕ್ ನಿಯಮದ ಪ್ರಕಾರ ಹ್ಯಾಟ್, ಸ್ಕಾರ್ಫ್, ಸನ್ ಗ್ಲಾಸ್ ಇವೆಲ್ಲಾ ಹಾಕಿಕೊಂಡು ಒಳಹೋಗುವಂತಿಲ್ಲ. ಹಾಗಾಗಿ ಹಿಜಾಬ್ ತೆಗೆಯುವಂತೆ ಬ್ಯಾಂಕ್ ಸಿಬ್ಬಂದಿಯೊಬ್ಬರು ಜಮೀಲಾರಿಗೆ ಸೂಚಿಸಿದರು ಎನ್ನಲಾಗಿದೆ. ಈ ವೇಳೆ ಬ್ಯಾಂಕ್ ಸಿಬ್ಬಂದಿ ಹಾಗೂ ಜಮೀಲಾ ನಡುವೆ ಮಾತಿನ ಚಕಾಮಕಿ ನಡೆದು ಅವರು ಅಳುತ್ತಾ ಹೊರನಡೆದರು.

ಘಟನೆಯ ನಂತರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಆಗಲಿಲ್ಲ. ಕ್ಷಮೆಯಾಚಿಸುತ್ತಿದ್ದೇವೆ. ಇನ್ಮುಂದೆ ಹೀಗಾಗುವುದಿಲ್ಲವೆಂದು ಸೌತ್ ಕ್ರೆಡಿಟ್ ಯೂನಿಯನ್ ಹೇಳಿದೆ.