ಪಾಕ್ ಮಾಜಿ ಅಧ್ಯಕ್ಷ ಜನರಲ್‌ ಫರ್ವೇಜ್ ಮುಷರಫ್‌ ನೈಟ್ ಕ್ಲಬ್'ವೊಂದರಲ್ಲಿ ಪತ್ನಿಯನ್ನು ಬಿಟ್ಟು ಯುವತಿಯೊಬ್ಬಳೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇಸ್ಲಮಾಬಾದ್(ಜ.24): ಪಾಕ್ ಮಾಜಿ ಅಧ್ಯಕ್ಷ ಜನರಲ್‌ ಫರ್ವೇಜ್ ಮುಷರಫ್‌ ನೈಟ್ ಕ್ಲಬ್'ವೊಂದರಲ್ಲಿ ಪತ್ನಿಯನ್ನು ಬಿಟ್ಟು ಯುವತಿಯೊಬ್ಬಳೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಯುವತಿಯೊಂದಿಗೆ ಕುಣಿಯುತ್ತಿರುವ ದೃಶ್ಯವನ್ನು ಕಾಣಬಹುದು. ಆದರೆ ಕಂಡು ಬಂದ ದೃಶ್ಯಗಳ ಪ್ರಕಾರ ಅವರು ನೈಟ್ ಕ್ಲಬ್'ನಲ್ಲಾದ ಘಟನೆ ಎಂಬುವುದನ್ನು ಅಂದಾಜಿಸಲಾಗಿದೆಯಾದರೂ ಇನ್ನೂ ಖಚಿತವಾಗಿಲ್ಲ. ಪಾಕಿಸ್ತಾನದ ಪತ್ರಕರ್ತೆ ಘರಿದಾ ಫರೂಕಿ ಈ ವಿಡಿಯೋವನ್ನು ಟ್ವಿಟರ್'ನಲ್ಲಿ ಅಪ್ಲೋಡ್ ಮಾಡಿದ್ದು ಇದರೊಂದಿಗೆ ಮಾಜಿ ಅಧ್ಯಕ್ಷನ ಮೇಲಿನ ಭಾವನೆಗಳನ್ನು 'Love this man' ಎಂಬ ಅಡಿಬರಹದೊಂದಿಗೆ ವ್ಯಕ್ತಪಡಿಸಿದ್ದಾರೆ.

Scroll to load tweet…

ಈ ಹಿಂದೆ ಬೆನ್ನೆಲುಬಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ತನ್ನ ಪತ್ನಿಯೊಂದಿಗೆ ಡ್ಯಾನ್ಸ್ ಮಾಡಿದ್ದ ಇವರ ವಿಡಿಯೋ ಸಾಮಾಜಿಕ ಜಾಲಾಗತಾಣಗಳಲ್ಲಿ ವೈರಲ್ ಆಗಿತ್ತು.