ಭೀಮಾತೀರ ಮತ್ತೆ ಬೆಚ್ಚಿಬಿದ್ದಿದೆ. ಭೀಮಾತೀರದಲ್ಲಿ ಮತ್ತೊಂದು ಗುಂಡಿನ ಮೊರೆತವಾಗಿದೆ. ಭೀಮಾತೀರದ ಮತ್ತೊಬ್ಬ ಹಂತಕ ಧರ್ಮರಾಜ್ ಪೊಲೀಸರ ಫೈರಿಂಗ್'ನಲ್ಲಿ ಹೆಣವಾಗಿದ್ದಾನೆ.
ವಿಜಯಪುರ(ಅ.30): ಭೀಮಾತೀರ ಮತ್ತೆ ಬೆಚ್ಚಿಬಿದ್ದಿದೆ. ಭೀಮಾತೀರದಲ್ಲಿ ಮತ್ತೊಂದು ಗುಂಡಿನ ಮೊರೆತವಾಗಿದೆ. ಭೀಮಾತೀರದ ಮತ್ತೊಬ್ಬ ಹಂತಕ ಧರ್ಮರಾಜ್ ಪೊಲೀಸರ ಫೈರಿಂಗ್'ನಲ್ಲಿ ಹೆಣವಾಗಿದ್ದಾನೆ.
ಪುತ್ರಪ್ಪ ಸಾಹುಕಾರ್ ಹಾಗೂ ಫಯಾಜ್ ಮುಷರಫ್ ಕೊಲೆಯಲ್ಲಿ ಧರ್ಮರಾಜ್ ಆರೋಪಿಯಾಗಿದ್ದ. ಕೆಲ ದಿನಗಳ ಹಿಂದೆ ಜಾಮೀನು ಮೇರೆಗೆ ಧರ್ಮರಾಜ್ ಹೊರಬಂದಿದ್ದ .ಇತ್ತೀಚೆಗೆ ಹಂತಕ ಧರ್ಮರಾಜ್ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪ ಕೇಳಿ ಬರುತ್ತಿತ್ತು. ಮಾಹಿತಿ ಮೇರೆಗೆ ಧರ್ಮರಾಜ್ ಮನೆಗೆ ಪೊಲೀಸರು ಪರಿಶೀಲನೆ ನಡೆಸಲು ಮುಂದಾದ್ರು.
ಪೊಲೀಸರ ದಾಳಿ ವೇಳೆ ಹಂತಕ ಧರ್ಮರಾಜ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪ್ರತಿಯಾಗಿ ಆತ್ಮರಕ್ಷಣೆಗಾಗಿ ಪೊಲಿಸರು ಹಾರಿಸಿದ ಗುಂಡಿನ ದಾಳಿಯಲ್ಲಿ ಧರ್ಮರಾಜ್ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಪಿಎಎಸ್'ಐ ಗೋಪಾಲ್'ಗೆ 2 ಗುಂಡು ತಗುಲಿವೆ. ಅವ್ರನ್ನ ಸೋಲ್ಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
