ಬೆಂಗಳೂರು(ಅ.05): ಕಳೆದ ಶನಿವಾರದಂದು ಕಮರ್ಷಿಯಲ್​ ಸ್ಟ್ರೀಟ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಇಲಿಯಾಸ್​ ಕೊಲೆ ಕೇಸಿನ ವಿಡಿಯೋ ಸುವರ್ಣನ್ಯೂಸ್​ಗೆ ಲಭ್ಯವಾಗಿದೆ.

ಶನಿವಾರ ಮಧ್ಯಾಹ್ನ ಈ ಕೃತ್ಯ ನಡೆದಿದ್ದು, ನಡು ರಸ್ತೆಯಲ್ಲೆ ಮಚ್ಚು ಲಾಂಗ್ ಗಳಿಂದ ನಡು ರಸ್ತೆಯಲ್ಲೇ ಕೊಚ್ಚಿಕೊಂದಿದ್ದಾರೆ.

ಹುಡುಗೀಯ ವಿಚಾರವಾಗಿ ನಡೆದ ಕೊಲೆ ನಡೆದಿದ್ದು, ಈ ಹಿಂದೆ ಮೃತ ಇಲಿಯಾಸ್​, ನದಿಂ ಎಂಬ ಮತ್ತೊಬ್ಬ ರೌಡಿಯನ್ನ ಕೊಂದು ಜೈಲಿಗೆ ಹೋಗಿದ್ದ. ನಂತರ 10 ದಿನಗಳ ಬಳಿಕ ಬೇಲ್​ ಮೇಲೆ ಆಚೆ ಬಂದಿದ್ದ.

ಈತ ಆಚೆ ಬರುವುದನ್ನೇ ನೋಡಿದ್ದ ಆರೋಪಿಗಳಾದ ನಾಝಿಂ, ಪಾಸಿ ನಝೀರ್​ ಸೇರಿದಂತೆ ಐದು ಜನ ಆರೋಪಿಗಳು ತನ್ನ ತಂಗಿಯನ್ನ ಮದ್ವೆ ಮಾಡಿಸ್ತಿವಿ ಎಂದು ಪ್ಲಾನ್​ ಮಾಡಿ ಕರೆಸಿಕೊಂಡು ಕೊಂದು ಹಾಕಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿದ್ದ ಕಮರ್ಷಿಯಲ್​ ಸ್ಟ್ರೀಟ್​ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.