ಬೆಂಗಳೂರು(ಡಿ.10): ರೌಡಿಶೀಟರ್​ ಒಬ್ಬನನ್ನ ದುಷ್ಕರ್ಮಿಗಳು ಲಾಂಗು ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಕೋ ಲೇಔಟ್​ನ ಸದ್ದುಗುಂಟೆ ಪಾಳ್ಯದಲ್ಲಿ ನಡೆದಿದೆ. 31 ವರ್ಷದ ಸುನೀಲ್ ಎಂಬಾತ ಕೊಲೆಯಾಗಿರುವ ರೌಡಿಶೀಟರ್.

ಕುಡಿತದ ಚಟಕ್ಕೆ ಬಿದ್ದಿದ್ದ ರೌಡಿ ಸುನೀಲ್ ನಿನ್ನೆ ಮದ್ಯಪಾನಕ್ಕಾಗಿ ಸದ್ದುಗುಂಟೆ ಪಾಳ್ಯದ ವೆಂಕಟೇಶ್ವರ ಲೇಔಟ್​ನಲ್ಲಿರುವ ತೃಪ್ತಿ ಬಾರಿಗೆ ಬಂದಿದ್ದಾನೆ. ಈ ವೇಳೆ ಹಂತಕ ಪಡೆ ರಾತ್ರಿ 8.30ರ ಸುಮಾರಿಗೆ ಬಾರ್ ಒಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ದ್ದಾರೆ. ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುನೀಲ್'​ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಮೈಕೋಲೇಔಟ್ ಪೊಲೀಸ್ರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಳೆ ವೈಷಮ್ಯದ ಹಿನ್ನಲೆಯಲ್ಲಿ ರೌಡಿಶೀಟರ್​​ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.