Asianet Suvarna News Asianet Suvarna News

ಮಠದಲ್ಲೇ ಸ್ಕೇಚ್ ಹಾಕಿ ಮರ್ಡರ್ :ರಾಜ್ಯದ ಪ್ರತಿಷ್ಠಿತ ಮಠದಲ್ಲಿ ನಡೆದ ಘಟನೆ

ಇತ್ತೀಚಿಗಷ್ಟೆ ರೇಣುಕಮ್ಮನ ಮಗಳು ಚೈತ್ರ, ಪುಣೆಯಿಂದ ತನ್ನ 3 ವರ್ಷದ ಮಗ ಸೃಜನ್ ಜತೆ ಉತ್ತರಾಧಿಕಾರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮಠಕ್ಕೆ ಆಗಮಿಸಿದ್ದಳು. ಇದೇ ಸಮಯದಲ್ಲಿ ರೇಣುಕಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ರುದ್ರೇಶ್ನಿದ್ರೆ ಮಾತ್ರೆ ಬೆರಸಿ ಕೊಲೆ ಮಾಡಿ ಮಗುವನ್ನು ನೀರಿಗೆ ಎಸೆದಿದ್ದ.

Murder at Shivamogga mata
  • Facebook
  • Twitter
  • Whatsapp

ಶಿವಮೊಗ್ಗ(ಏ.12): ಇದು ಇಡೀ ರಾಜ್ಯವೇ ಬೆಚ್ಚಿಬೀಳುವ ಸುದ್ದಿ ಕರ್ನಾಟಕದ ಪ್ರತಿಷ್ಠಿತ ಮಠದಲ್ಲಿ ನಡೆದಿದೆ. ಇದರಿಂದ ಮಠದ ಭಕ್ತರಿಗೆ ಶಾಕ್​ ಹಾಗೂ ರಾಜ್ಯದ ಜನತೆಗೆ ಆಘಾತವಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಪ್ರಸಿದ್ಧ ಮೂಲೆಗದ್ದೆ ಮಠದಲ್ಲಿ 3 ವರ್ಷದ ಸೃಜನ್ ಎಂಬ ಪುಟ್ಟ ಬಾಲಕನನ್ನು  ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿದ ನಂತರ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಉತ್ತರಾಧಿಕಾರಿಯ ಪಟ್ಟಾಭಿಷೇಕಕ್ಕೆ ಮುನ್ನ ಬಾಲಕನ ಹತ್ಯೆಯಾಗಿದೆ.40 ವರ್ಷದ ಇತಿಹಾಸ ಹೊಂದಿರುವ ಮೂಲಗದ್ದೆ ಮಠ

ಈ ತಿಂಗಳ ಕೊನೆಯಲ್ಲಿ ಶಾಂತಕುಮಾರ ದೇಶಿಕೇಂದ್ರ ಸ್ವಾಮೀಜಿ ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೆದಿತ್ತು. ಹಿರಿಯ ಸಿದ್ಧಲಿಂಗಸ್ವಾಮೀಜಿ ತಂಗಿ ರೇಣುಕಮ್ಮನ ಮೊಮ್ಮಗ 3 ವರ್ಷದ ಸೃಜನ್​ ಕೊಲೆ ಮಾಡಲಾಗಿದೆ. ಮಠದಲ್ಲಿ ಉಸ್ತುವಾರಿ ಕೆಲಸ ಮಾಡುತ್ತಿದ್ದ ಸಿದ್ಧಲಿಂಗ ಸ್ವಾಮೀಜಿ ಅವರ ಸಂಬಂಧಿ ರುದ್ರೇಶ್​ ಎಂಬ ಯುವಕ ಕೊಲೆ ಮಾಡಿದ್ದಾನೆ. ಮಠದಲ್ಲಿ ಕಳವು ಮಾಡಿ ಸಿಕ್ಕಿಬಿದ್ದ ಕಾರಣ ಸೃಜನ್ ಸಂಬಂಧಿ ರೇಣುಕಮ್ಮನ ವಿರುದ್ಧ ಕಿಡಿ ಕಾರುತ್ತಿದ್ದ.

ಇತ್ತೀಚಿಗಷ್ಟೆ ರೇಣುಕಮ್ಮನ ಮಗಳು ಚೈತ್ರ, ಪುಣೆಯಿಂದ ತನ್ನ 3 ವರ್ಷದ ಮಗ ಸೃಜನ್ ಜತೆ ಉತ್ತರಾಧಿಕಾರಿ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮಠಕ್ಕೆ ಆಗಮಿಸಿದ್ದಳು. ಇದೇ ಸಮಯದಲ್ಲಿ ರೇಣುಕಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ ರುದ್ರೇಶ್​ ನಿದ್ರೆ ಮಾತ್ರೆ ಬೆರಸಿ ಕೊಲೆ ಮಾಡಿ ಮಗುವನ್ನು ನೀರಿಗೆ ಎಸೆದಿದ್ದ. ನಿನ್ನೆ ಬೆಳಗ್ಗೆ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು.

Follow Us:
Download App:
  • android
  • ios