Asianet Suvarna News Asianet Suvarna News

ಪಕ್ಷದ ಆಂತರಿಕ ವಿಚಾರ ಬಹಿರಂಗ ಮಾಡಿದ್ರೆ ಹುಷಾರ್!: ಪರೋಕ್ಷವಾಗಿ ಈಶ್ವರಪ್ಪಗೆ ಖಡಕ್ ಎಚ್ಚರಿಕೆ

ರಾಜ್ಯ ಬಿಜೆಪಿಯ ಬಿಕ್ಕಟ್ಟಿನ ಪರಿಹಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ನಿನ್ನೆ ಕೂಡ ಪಕ್ಷದ ಹಲವು ನಾಯಕರ ಜೊತೆ ಸಭೆ ನಡೆಸಿದರು.

Muralidhar Rao Indirectly Gavea Warning to Eshwarappa
  • Facebook
  • Twitter
  • Whatsapp

ಬೆಂಗಳೂರು(ಮೇ.01): ರಾಜ್ಯ ಬಿಜೆಪಿಯ ಬಿಕ್ಕಟ್ಟಿನ ಪರಿಹಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ನಿನ್ನೆ ಕೂಡ ಪಕ್ಷದ ಹಲವು ನಾಯಕರ ಜೊತೆ ಸಭೆ ನಡೆಸಿದರು.

ಬ್ರಿಗೇಡ್​ ಬೇಕೋ ಅಥವಾ ಬಿಜೆಪಿ ಬೇಕೋ ಈಶ್ವರಪ್ಪ ಆಯ್ಕೆ ಮಾಡಿಕೊಳ್ಳಲಿ. ಪಕ್ಷದ ಆಂತರಿಕ ವಿಚಾರಗಳ ಬಹಿರಂಗ ಚರ್ಚೆ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂಬ ಖಡಕ್ ಸಂದೇಶವನ್ನ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ ರಾವ್ ರವಾನಿಸಿದ್ದಾರೆ.

ಇನ್ನು, ನಿನ್ನೆ ಸಂಜೆ ಪ್ರತಿಕ್ರಿಯೆ ನೀಡಿರುವ ಮುರುಳಿಧರರಾವ್​ ಬಿಜೆಪಿಯಲ್ಲಿ ಬೇರ್ಯಾವುದೇ ಸಂಘಟನೆ ನಡೆಸುವಂತಿಲ್ಲ.. ಇದು ಹೈಕಮಾಂಡ್ ಸೂಚನೆ ಎನ್ನುವ ಮೂಲಕ ಪರೋಕ್ಷವಾಗಿ ಈಶ್ವರಪ್ಪಗೆ ಖಡಕ್ ಎಚ್ಚರಿಕೆಯ ಸಂದೇಶ ನೀಡಿದ್ರು.

Follow Us:
Download App:
  • android
  • ios