Asianet Suvarna News Asianet Suvarna News

(ವಿಡಿಯೋ)ಫೇಸ್'ಬುಕ್ ಲೈವ್ ಮಾಡಿಕೊಂಡೇ 19ನೇ ಮಹಡಿಯಿಂದ ಹಾರಿದ ಯುವಕ: ಬೆಚ್ಚಿಬಿದ್ದ ವೀಕ್ಷಕರು!

ಭವಿಷ್ಯದ ಕನಸು ಓದಲು ಎಂದು ಬೆಂಗಳೂರಿನ ಹುಡುಗ ಮುಂಬೈಗೆ ಬಂದಿದ್ದ. ಆದರೆ, 3ನೇ ವರ್ಷದ ಎಂಜಿನಿಯರಿಂಗ್​'ನಲ್ಲಿ ಪದೇ ಪದೇ ಫೇಲ್​ ಆಗುತ್ತಿದ್ದರಿಂದ ನೊಂದ ಹುಡುಗ ಕೊನೆಗೆ ಶರಣಾಗಿದ್ದು ಸಾವಿಗೆ.

Mumbai Youth Goes Live On Facebook Commits Suicide By Jumping From 19th Floor Of 5 Star Hotel Taj

ಮುಂಬೈ(ಎ.04): ಬೆಂಗಳೂರು ಮೂಲದ 24 ವರ್ಷದ ಯುವಕನೋರ್ವ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರ್ಜುನ್‌ ಭಾರದ್ವಾಜ್ ಎಂಬ ಯುವಕ ಇಲ್ಲಿನ ತಾಜ್‌ ಲ್ಯಾಂಡ್ಸ್‌‌ ಎಂಡ್ ಹೋಟೆಲ್‌ನ 19 ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ವಿಡಿಯೋವೊಂದನ್ನು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾನೆ.

ಮೃತ ಅರ್ಜುನ್‌ ಇಲ್ಲಿನ ವಿಲೆ ಪಾರ್ಲೆಯಲ್ಲಿರುವ ನರ್ಸೀ ಮೋನಜೀ ಕಾಲೇಜ್‌ ಆಫ್‌ ಕಾಮರ್ಸ್‌ ಅಂಡ್‌ ಎಕಾನಮಿಕ್ಸ್'ನಲ್ಲಿ 3ನೇ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ. ಸೋಮವಾರ ಮಧ್ಯರಾತ್ರಿ 3:30 ಸುಮಾರಿಗೆ ತಾಜ್‌ ಲ್ಯಾಂಡ್ಸ್‌‌ ಎಂಡ್ ಹೋಟೆಲ್‌'ನಲ್ಲಿ ರೂಮ್‌ ಬುಕ್‌ ಮಾಡಿದ್ದ. ಕೆಲ ಸಮಯದ ಬಳಿಕ ಊಟಕ್ಕಾಗಿ ಆರ್ಡರ್‌‌ ಮಾಡಿದ್ದ. ಇದಾದ ನಂತರ ಬೆಳಗ್ಗೆ 6:30ರ ವೇಳೆಗೆ ರೂಮ್‌'ನ ಕಿಟಕಿಯ ಗಾಜು ಒಡೆದು ಅಲ್ಲಿಂದಲೇ ಜಿಗಿದಿದ್ದಾನೆ.

ಅರ್ಜುನ್‌ ಸಾವಿಗೂ ಮುನ್ನ ತನ್ನ ಆತ್ಮಹತ್ಯೆ ಕುರಿತಂತೆ ವಿಡಿಯೋವೊಂದನ್ನು ಮಾಡಿ, ಆ ವಿಡಿಯೋ ಫೇಸ್‌ ಬುಕ್‌'ನಲ್ಲಿ  ಲೈವ್‌‌ ನೀಡಿದ್ದಾನೆ. ಫೇಸ್‌'ಬುಕ್‌'ನಲ್ಲಿ ಅರ್ಜುನ್‌ನ ಆ ವಿಡಿಯೋ ನೋಡಿ ಹೋಟೆಲ್‌ ಸಿಬ್ಬಂದಿ ರೂಮ್‌'ಗೆ ಧಾವಿಸಿದ್ದಾರೆ. ಅಷ್ಟರಲ್ಲೇ ಆತ ರೂಮ್‌'ನಿಂದ ಜಿಗಿದು ಬಿಟ್ಟಿದ್ದಾನೆ. ಅಲ್ಲದೇ, ರೂಮ್‌‌‌'ನಲ್ಲಿ ಡೆತ್‌ನೋಟು ಸಿಕ್ಕಿದ್ದು, ತೀವ್ರ ಖಿನ್ನತೆ ಹಾಗೂ ಡಗ್ಸ್‌ ಅಡಿಕ್ಟ್'ನಿಂದ ಇಂತಹ ನಿರ್ಧಾರಕ್ಕೆ ಬಂದಿದ್ದಾಗಿ ಅರ್ಜುನ್‌ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ಅರ್ಜುನ್‌ ತಂದೆ-ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದು, ಅವರಿಗೆ ಮಗನ ಸಾವಿನ ಕುರಿತು ಮಾಹಿತಿ ನೀಡಲಾಗಿದೆ.

 

 

Follow Us:
Download App:
  • android
  • ios