ಈ ಬಗ್ಗೆ ವಾರದೊಳಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.

ಮುಂಬೈ(ಡಿ.11): ಬುರ್ಖಾ ಧರಿಸಬಾರದು ಎಂದು ಹಿರಿಯ ಸಹೋದ್ಯೋಗಿ ಸೂಚಿಸಿದ್ದಕ್ಕೆ ಶಿಕ್ಷಕಿ ಶಬಿನಾ ಖಾನ್ ನಜ್ನೀನ್(25) ಎಂಬುವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವ ಘಟನೆ ಮಹಾರಾಷ್ಟ್ರದ ಕುರ್ಲಾದ ಶಾಲೆಯಲ್ಲಿ ನಡೆದಿದೆ. ಆದರೆ, ಶಿಕ್ಷಕಿಯ ರಾಜಿನಾಮೆಯನ್ನು ಆಡಳಿತ ಮಂಡಳಿ ಅಂಗೀಕಸಿರಿಲ್ಲ. ಈ ಬಗ್ಗೆ ವಾರದೊಳಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಂಡಳಿ ತಿಳಿಸಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಂದರ್ಭದಲ್ಲಿ ತಲೆಗೆ ಧರಿಸುವ ಹಿಜಾಬ್ ಮತ್ತು ಬುರ್ಖಾ ತೆಗೆಯುವಂತೆ ಹಿರಿಯ ಸಹೋದ್ಯೋಗಿ ಸೂಚಿಸಿದ್ದರು. ಪ್ರಾಂಶುಪಾಲರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನನ್ನ ಧಾರ್ಮಿಕ ನಂಬಿಕೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ರಾಜಿನಾಮೆ ನೀಡಿದ್ದೇನೆ ಎಂದು ಶಿಕ್ಷಕಿ ಹೇಳಿದ್ದಾರೆ.