ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತದಿಂದ 22 ಮಂದಿ ನಿನ್ನೆ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ರೈಲ್ವೇ ಸಚಿವ ಪಿಯೂಶ್ ಗೋಯಲ್ ಇಂದು ರೈಲ್ವೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ನವದೆಹಲಿ (ಸೆ.30): ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತದಿಂದ 22 ಮಂದಿ ನಿನ್ನೆ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ರೈಲ್ವೇ ಸಚಿವ ಪಿಯೂಶ್ ಗೋಯಲ್ ಇಂದು ರೈಲ್ವೇ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.
ಇಂದು ರೈಲ್ವೇ ಸಚಿವ ಪಿಯುಶ್ ಗೋಯಲ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಮುಂಬೈ ಸ್ಥಳೀಯ ರೈಲಿನ ಸುರಕ್ಷತೆಯನ್ನು ಹೆಚ್ಚಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 200 ಜನ ಅಧಿಕಾರಿಗಳನ್ನು ಹೆಡ್ ಆಫೀಸ್’ನಿಂದ ಫೀಲ್ಡ್’ಗೆ ವರ್ಗಾವಣೆ ಮಾಡಲಾಗುವುದು. ಸಬರ್ಬನ್ ಟ್ರೇನ್’ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಗೋಯಲ್ ಆದೇಶಿಸಿದ್ದಾರೆ.
