ಮುಂಬೈಯ ಪ್ರಮುಖ ರೈಲು ನಿಲ್ದಾಣವಾದ ಛತ್ರಪತಿ ಶಿವಾಜಿ ಟರ್ಮಿನಸ್ ಹೆಸರನ್ನು ಬದಲಾಯಿಸಲಾಗಿದೆ.ಈ ಕುರಿತು ಕೇಂದ್ರೀಯ ರೈಲ್ವೇ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಇನ್ಮುಂದೆ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣದ ಹೆಸರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂದು ಕರೆಯಲ್ಪಡುವುದು.
ಮುಂಬೈ: ಮುಂಬೈಯ ಪ್ರಮುಖ ರೈಲು ನಿಲ್ದಾಣವಾದ ಛತ್ರಪತಿ ಶಿವಾಜಿ ಟರ್ಮಿನಸ್ ಹೆಸರನ್ನು ಬದಲಾಯಿಸಲಾಗಿದೆ.ಈ ಕುರಿತು ಕೇಂದ್ರೀಯ ರೈಲ್ವೇ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಇನ್ಮುಂದೆ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣದ ಹೆಸರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂದು ಕರೆಯಲ್ಪಡುವುದು.
ಛತ್ರಪತಿ ಶಿವಾಜಿ ಟರ್ಮಿಸನ್ ಹೆಸರಿನಲ್ಲಿ ‘ಮಹಾರಾಜ್’ ಸೇರಿಸಬೇಕೆಂದು ಶಿವಸೇನೆ ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಕಳೆದ ಜೂ.2 ರಂದು ಮಹಾರಾಷ್ಟ್ರ ಸರ್ಕಾರ ಕುರಿತು ನಿರ್ಧಾರವನ್ನು ಕೈಗೊಂಡಿತ್ತು. ಇದೀಗ ಕೇಂದ್ರ ರೈಲ್ವೇ ಇಲಾಖೆಯು ಸಿಎಸ್’ಟಿಗೆ ಮರುನಾಮಕರಣ ಮಾಡಿದೆ.
ಆದರೆ ಸಿಎಸ್’ಟಿ ರೈಲು ನಿಲ್ದಾಣದ ಹಳೆಯ ಕೋಡ್ (CSTM) ಹಾಗೇನೇ ಮುಂದುವರಿಯಲಿದೆ ಎಂದು ಇಲಾಖೆಯು ಹೇಳಿದೆ.
ಸಿಎಸ್’ಟಿ ಹಾಗೂ ಎಲ್ಫಿನ್’ಸ್ಟೋನ್ ರೈಲು ನಿಲ್ದಾಣಗಳಿಗೆ ಮರುನಾಮಕರಣ ಮಾಡುವಂತೆ ಮಹಾರಾಷ್ಟ್ರ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಎಲ್ಫಿನ್’ಸ್ಟೋನ್ ರೈಲು ನಿಲ್ದಾಣಕ್ಕೆ ಪ್ರಭಾದೇವಿ ರೈಲು ನಿಲ್ದಾಣ ಎಂಬ ಹೆಸರನ್ನು ಮಹಾರಾಷ್ಟ್ರ ಸರ್ಕಾರವು ಸೂಚಿಸಿತ್ತು.
