ಮೆಸೆಜ್ ರೋಮಿಯೋಗಳಿಗೆ ಕಾದಿದೆ ಗಂಡಾಂತರಯುವತಿಯರನ್ನು ಕಾಡುವ ಮಜ್ನಗಳಿಗೆ ಬೀಳಲಿದೆ ಗುನ್ನಾಮುಂಬೈ ಪೊಲೀಸರು ಮಾಡಿರುವ ಟ್ವಿಟ್ ನಲ್ಲಿ ಏನಿದೆ?

ಮುಂಬೈ(ಜೂ.28): ಮಹಿಳೆಯರು ಮತ್ತು ಯುವತಿಯರನ್ನು ಕಾಡುವ ಮೆಸೇಜಿಂಗ್ ಮಜ್ನುಗಳ ಕುರಿತಾದ ಮುಂಬೈ ಪೊಲೀಸರುರ ಟ್ವೀಟ್ ವೊಂದು ಭಾರೀ ವೈರಲ್ ಆಗಿದೆ.

Scroll to load tweet…

ಮಹಿಳೆಯರಿಗೆ ಇಂಟರ್ ನೆಟ್ ಮೂಲಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಕಾಡುವ ಮಜ್ನುಗಳೊಂದಿಗೆ ಈಗ ಮುಂಬೈ ಪೊಲೀಸರು ಫ್ರೆಂಡ್ ಶಿಪ್ ಬಯಸುತ್ತಿದು, ಬೆಂಡೆತ್ತಲು ತಯಾರಾಗಿದ್ದಾರೆ. ಗೊತ್ತೇ ಇಲ್ಲದ ವ್ಯಕ್ತಿಗಳು ಮೆಸೇಜ್ ಮಾಡಿ ಕಾಟ ನೀಡುತ್ತಿರುವ ಪ್ರಕರಣಗಳಿಂದ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತಿದ್ದು, ಮಹಿಳೆಯರಿಗೆ ಈ ಕಿರಿಕಿರಿಯಿಂದ ಮುಕ್ತಿ ಕೊಡಿಸಲು ಮುಂಬೈ ಪೊಲೀಸರು ಸಜ್ಜಾಗಿದ್ದಾರೆ. 

ಈ ಬಗ್ಗೆ ಮುಂಬೈ ಪೊಲೀಸರು ಮಾಡಿರುವ ಟ್ವೀಟ್ ನಲ್ಲಿರುವ ಮೀಮ್ ಎಲ್ಲರ ಗಮನ ಸೆಳೆಯುತ್ತಿದೆ. ನಿಮಗೆ ಮೆಸೇಜ್ ಕಳಿಸುವ ಪರಿಚಯವಿಲ್ಲದ ವ್ಯಕ್ತಿಗಳ ನಂಬರ್ ನ್ನು ಬ್ಲಾಕ್ ಮಾಡಿ, ನಾವು ಅವರ ಭಾವನೆ ಮತ್ತು ಉದ್ದೇಶಗಳನ್ನು ವಿಚಾರಿಸಿಕೊಳ್ಳುತ್ತೇವೆ ಎಂದು ಟ್ವಿಟ್ ನಲ್ಲಿ ಹೇಳಲಾಗಿದೆ.