ಸದ್ಯ ಜನರನ್ನು ವರ್ಷದಿಂದ ಕಾಡುತ್ತಿದ್ದ ಪ್ರಶ್ನೆಗೆ ನಿನ್ನೆ ತೆರೆಕಂಡ ಸಿನಿಮಾದಲ್ಲಿ ಉತ್ತರ ಲಭಿಸಿದೆ. ಇದೇ ಖುಷಿಯಲ್ಲಿದ್ದ ಜನರಿಗೆ ಮುಂಬಯಿ ಪೊಲೀಸರು ಸದ್ಯ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿರುವ ಪ್ರಶ್ನೆ ಮತ್ತೆ ನಿದ್ದೆಗೆಡಿಸಿದೆ.

ನವದೆಹಲಿ(ಎ.29): ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುತ್ತಿದೆ. ದೇಶದಾದ್ಯಂತ ಸಿನಿಮಾ ಮಂದಿರಗಳು ಹೌಸ್ ಫುಲ್ ಆಗಿವೆ. ಇನ್ನು ಸಿನಿಮಾ ಬಿಡುಗಡೆಗೂ ಮುನ್ನವೇ 10 ಕೋಟಿ ಅಡ್ವಾನ್ಸ್ ಟಿಕೆಟ್ ಬುಕುಂಗ್ ಕೂಡಾ ನಡೆದಿತ್ತು. ಜನರಲ್ಲಿ ಈ ಮಟ್ಟದ ಕುತೂಹಲ ಮೂಡಿಸಿದ್ದು ಬಾಹುಬಲಿ 1ರಲ್ಲಿ ಉತ್ತರಿಸದೆ ಜನರ ಕುತೂಹಲ ಕಾದಿಟ್ಟ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲಲು ಕಾರಣವಾದ ಅಂಶ. ಆ ಮಿಲಿಯನ್ ಡಾಲರ್ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿತ್ತು.

ಸದ್ಯ ಜನರನ್ನು ವರ್ಷದಿಂದ ಕಾಡುತ್ತಿದ್ದ ಪ್ರಶ್ನೆಗೆ ನಿನ್ನೆ ತೆರೆಕಂಡ ಸಿನಿಮಾದಲ್ಲಿ ಉತ್ತರ ಲಭಿಸಿದೆ. ಇದೇ ಖುಷಿಯಲ್ಲಿದ್ದ ಜನರಿಗೆ ಮುಂಬಯಿ ಪೊಲೀಸರು ಸದ್ಯ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿರುವ ಪ್ರಶ್ನೆ ಮತ್ತೆ ನಿದ್ದೆಗೆಡಿಸಿದೆ. ಆದರೆ ಈ ಪ್ರಶ್ನೆಗೆ ಉತ್ತರ ನೀಡುವುದು ಕೊಂಚ ಕಷ್ಟ. ಆದರೆ ಜನರ ಸುರಕ್ಷತೆಗಾಗಿ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದನ್ನು ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಅವರು ಕೇಳಿದ ಆ ಪ್ರಶ್ನೆ ಏನು ಅಂತೀರಾ? ನೀವೇ ನೋಡಿ.

Scroll to load tweet…

ಮುಂಬಯಿ ಪೊಲೀಸರು ತಮ್ಮ ಟ್ವಿಟರ್ ಅಕೌಂಟ್'ನಲ್ಲಿ 'ನಮ್ಮ ಬಳಿ ಎರಡು ಪ್ರಶ್ನೆಗಳಿವೆ. ಒಂದು- ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ? ಎರಡನೆಯದ್ದು- ಜನರು ಟ್ರಾಫಿಕ್ ನಿಯಮಗಳನ್ನೇಕೆ ಪಾಲಿಸುವುದಿಲ್ಲ?' ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನು #BahubaliOfTrafficDiscipline ಎಂಬ ಹ್ಯಾಷ್ ಟ್ಯಾಗ್ ಜೊತೆ ಶೇರ್ ಮಾಡಲಾಗಿದೆ. ಸದ್ಯ ಈ ಟ್ವೀಟ್ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈವರೆಗೆ 1000ಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ.

ಇಲ್ಲಿ ಹಲವಾರು ಮಂದಿ ಪೊಲೀಸರ ಎರಡನೆಯ ಪ್ರಶ್ನೆಗೆ ತಮಗೆ ತೋಚಿದ ಉತ್ತರ ನೀಡಿದ್ದಾರೆ. ಇನ್ನು ಮೊದಲನೇ ಪ್ರಶ್ನೆ ಉತ್ತರ ಈಗಾಗಲೇ ನಮಗೆ ಲಭಿಸಿದೆ. ಮುಂಬಯಿ ಪೊಲೀಸರು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಸ್ಯಾಮಯ ಟ್ವೀಟ್'ಗಳನ್ನು ಮಾಡುವುದು ಹೊಸದೇನಲ್ಲ ಈ ಮೊದಲೂ ಇಂತಹ ಟ್ವೀಟ್'ಗಳು ಮುಂಬಯಿ ಪೊಲೀಸರ ಅಕೌಂಟಿನಿಂದ ಶೇರ್ ಆಗಿವೆ.

ಕೃಪೆ: NDTV