ಮುಂಬೈ[ಜು.19]: ಸುಲಿಗೆ ಪ್ರಕ​ರ​ಣ​ವೊಂದಕ್ಕೆ ಸಂಬಂಧಿ​ಸಿ​ದಂತೆ ಭೂಗತ ಪಾತ​ಕಿ ದಾವೂದ್‌ ಇಬ್ರಾ​ಹಿಂ ಸಂಬಂಧಿ ರಿಜ್ವಾನ್‌ ಕಸ್ಕ​ರ್‌ನನ್ನು ಬುಧ​ವಾರ ತಡ​ರಾತ್ರಿ ಮುಂಬೈ ಪೊಲೀ​ಸರು ವಿಮಾನ ನಿಲ್ದಾ​ಣ​ದಲ್ಲಿ ಬಂಧಿಸಿದ್ದಾರೆ.

ದಾವೂದ್‌ನ ಸೋದರ ಇಕ್ಬಾಲ್‌ ಕಸ್ಕ​ರ್‌ನ ಮಗನೇ ಈ ರಿಜ್ವಾ​ನ್‌. 2017ರಲ್ಲಿ ಮುಂಬೈನ ಉದ್ಯ​ಮಿ​ಯನ್ನು ಬೆದ​ರಿಸಿ ಸುಲಿಗೆ ಮಾಡಿದ್ದ ಪ್ರಕ​ರ​ಣ​ವೊಂದರ ವಿಚಾ​ರಣೆ ವೇಳೆ ಹಲ​ವರ ಹೆಸ​ರು​ಗಳು ಬೆಳ​ಕಿಗೆ ಬಂದಿ​ದ್ದವು. ಅವ​ರೆ​ಲ್ಲ​ರನ್ನೂ ವಿಚಾ​ರ​ಣೆಗೆ ಒಳ​ಪ​ಡಿ​ಸಿ​ದಾಗ ರಿಜ್ವಾನ್‌ ಹೆಸರು ಕೇಳಿ​ಬಂದಿತ್ತು.

ಇದ​ನ್ನ​ರಿತ ರಿಜ್ವಾನ್‌ ದೇಶ ತೊರೆದು ಓಡಿ​ಹೋ​ಗಲು ಮುಂಬೈನ ಅಂತಾ​ರಾಷ್ಟ್ರೀಯ ವಿಮಾನ ನಿಲ್ದಾ​ಣಕ್ಕೆ ತೆರ​ಳಿದ್ದಾಗ ಅಲ್ಲಿಗೆ ತೆರ​ಳಿದ ಪೊಲೀ​ಸರು ರಿಜ್ವಾ​ನ್‌​ನನ್ನು ವಶಕ್ಕೆ ಪಡೆದಿದ್ದಾರೆ.