ಮುಂಬೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಗತ್ತಿನ ಅತೀ ತೂಕದ ಮಹಿಳೆ ಈಜಿಪ್ಟಿನ ಎಮನ್ ಅಹ್ಮದ್ ಅಸಹಜ ತೂಕ ಹೊಂದಿದ್ದು ಇಂದು ಮುಂಬೈನಿಂದ ಅಬುದಾಬಿಗೆ ವಾಪಸಾಗಿದ್ದಾರೆ.
ಮುಂಬೈ(ಮೇ.04): ಮುಂಬೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಗತ್ತಿನ ಅತೀ ತೂಕದ ಮಹಿಳೆ ಈಜಿಪ್ಟಿನ ಎಮನ್ ಅಹ್ಮದ್ ಅಸಹಜ ತೂಕ ಹೊಂದಿದ್ದು ಇಂದು ಮುಂಬೈನಿಂದ ಅಬುದಾಬಿಗೆ ವಾಪಸಾಗಿದ್ದಾರೆ.
ಅತೀತೂಕ ಸಮಸ್ಯೆಗೆ ಅಲ್ಲಿ ಚಿಕಿತ್ಸೆ ಮುಂದುವರೆಸಲಿದ್ದಾರೆ ಎಂದು ಹೇಳಲಾಗಿದೆ. ಎಮನ್ ಅಹಮದ್ ಪ್ರಕರಣವು ವೈದ್ಯ ಲೋಕಕ್ಕೇ ಸವಾಲಾಗಿತ್ತು. ಮುಂಬೈಯ ಸೈಫಿ ಆಸ್ಪತ್ರೆಯ ವೈದ್ಯರ ಭರವಸೆ ಮೇಲೆ ಅವರು ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಶಸ್ತ್ರಚಿಕಿತ್ಸೆಯಿಂದ ಆಕೆ ಬರೋಬ್ಬರಿ 250 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ವೈದ್ಯರು ಹೇಳಿಕೆ ನೀಡಿದ್ದರು. ಆದರೆ, ವೈದ್ಯರ ವರದಿಗಳೆಲ್ಲಾ ಸುಳ್ಳು, ಎಮನ್ ತೂಕ ಇಳಿದಿಲ್ಲ ಎಂದು ಆಕೆಯ ಸಹೋದರಿ ಆ ಬಳಿಕ ಹೇಳಿಕೆ ನೀಡಿದ್ದರು.
ಪ್ಯಾಸೆಂಜರ್ ವಿಮಾನದಲ್ಲಿ ಎಮನ್ ಅಹಮದ್ ಅಬುದಾಬಿಗೆ ತೆರಳಲಿದ್ದು, ಕೆಲವು ಆಸನಗಳನ್ನು ತೆಗೆದು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಏರ್’ಪೋರ್ಟ್ ಗೆ ವೇಗವಾಗಿ ತಲುಪಲು ಅನುಕೂಲವಾಗುವಂತೆ ಗ್ರೀನ್ ಕಾರಿಡಾನ್ ನಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ.
