ಮುಂಬೈ, [ನ.01]: ಮದ್ಯದ ಅಮಲಿನಲ್ಲಿ ಏನೇನು ಮಾಡ್ತಾರೋ ಅಂತ ಕುಡುಕರಿಗೆ ಗೊತ್ತಿರಲ್ಲ. ಒಬ್ಬಬ್ರು ಗೊತ್ತಿದ್ರೂ ಬೇಕು ಅಂತಾಲೇ ನಾಟಕವಾಡುತ್ತಾರೆ.

 ಅಂತಹದ್ದೇ ಒಂದು ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ಮದ್ಯದ ನಶೆಯಲ್ಲಿದ್ದ ಮಾಡೆಲ್ ಒಬ್ಬಳು ಪೊಲೀಸ್ ಮುಂದೆ ಬಟ್ಟೆ ಬಿಚ್ಚಿದ್ದಳು. 

ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಬಳಿಕ ಮಾಡೆಲ್, ಪೊಲೀಸ್ ಮುಂದೆ ಬಟ್ಟೆ ಬಿಚ್ಚಿದ್ದು ಏಕೆ ಎಂಬುದನ್ನು ವಿವರಿಸಿದ್ದಾಳೆ.

ಕುಡಿದು ನಶೆಯಲ್ಲಿದ್ದ 27 ವರ್ಷದ ಮೇಘಾ ಶರ್ಮಾ ಎಂಬ ಮಾಡೆಲ್ ಭದ್ರತಾ ಸಿಬ್ಬಂದಿಗೆ ಸಿಗರೇಟ್ ತರುವಂತೆ ಕೇಳಿದ್ದಳು. ಅದಕ್ಕೆ ಗಾರ್ಡ್ ಒಪ್ಪಿರಲಿಲ್ಲ. ಕೋಪಗೊಂಡ ಮಾಡೆಲ್ ಆತನಿಗೆ ನಿಂದಿಸಿ, ಹೊಡೆದಿದ್ದಳು. 

ಈ ಬಗ್ಗೆ ಗಾರ್ಡ್ 100 ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಪೊಲೀಸ್ ಬರ್ತಿದ್ದಂತೆ ಬಟ್ಟೆ ಬಿಚ್ಚಿದ್ದ ಮೇಘಾ ಶರ್ಮಾ, ಪೊಲೀಸ್ ಠಾಣೆಗೆ ಹೋಗಲು ನಿರಾಕರಿಸಿದ್ದಾಳೆ.

 ಬಟ್ಟೆ ಬಿಚ್ಚಿದ್ಯಾಕೆ? 
ಮುಂಬೈನ ಅಪಾರ್ಟ್ಮೆಂಟ್ ನಲ್ಲಿ ನಾನೊಬ್ಬಳೆ ವಾಸವಾಗಿದ್ದೇನೆ. ಈಗ ಕಾಲ ಸರಿಯಿಲ್ಲ. ಪೊಲೀಸರೂ ಅತ್ಯಾಚಾರವೆಸಗುತ್ತಿರುವ ಘಟನೆ ನಡೆಯುತ್ತಿದೆ. ರಾತ್ರಿ 1 ಗಂಟೆ ವೇಳೆಗೆ ಮಹಿಳಾ ಕಾನ್ಸ್ ಟೇಬಲ್ ಇಲ್ಲದೆ 3 ಪೊಲೀಸರು ನನ್ನ ಬಂಧನಕ್ಕೆ ಮುಂದಾಗಿದ್ದಾರೆ. 

ಅವರನ್ನು ಹೇಗೆ ನಂಬುವುದು. ಮಹಿಳಾ ಕಾನ್ಸ್ ಟೇಬಲ್ ಇಲ್ಲದೆ ಬಂಧನಕ್ಕೆ ಬಂದ ಪೊಲೀಸ್ ನೋಡಿ ನಾನು ಭಯಗೊಂಡಿದ್ದೆ. ಹಾಗಾಗಿ ಬಟ್ಟೆ ಬಿಚ್ಚಿ ನಾಟಕವಾಡಿದೆ ಎಂದು ಸ್ಪಷ್ಟನೆ ನೀಡಿದ್ದಾಳೆ.