ಮುಂಬೈ :  ರಸ್ತೆ ಮೇಲೆ ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ಮಹಿಳೆ ಬಳಿ ಅಸಭ್ಯವಾಗಿ ವರ್ತಿಸಿದವನೋರ್ವ ಜೈಲು ಸೇರಿದ್ದಾನೆ. 

 40 ವರ್ಷದ ಮಹಿಳೆಯ ಪ್ಯಾಂಟ್ ನ್ನು ಸಾರ್ವಜನಿಕವಾಗಿ ಎಳೆದು ಹಾಕಿದ ಭೂಪನನ್ನು ಮುಂಬೈ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮುಂಬೈನ ಕಂಡಿವಾಲಿ ಪ್ರದೇಶ ನ್ಯೂ ಲಿಂಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. 

ರಾಮ್ ರಾಜ್ ಪವಾರ್ ಎಂಬಾತ ಸ್ಕೂಟರ ಸ್ಟಾರ್ಟ್ ಮಾಡುತ್ತ ನಿಂತಿದ್ದ. ಇದೇ ವೇಳೆ ಅದೇ ರಸ್ತೆಯಲ್ಲಿ ಮಹಿಳೆ ಬಂದಿದ್ದಾರೆ. ತಮ್ಮ ಪಾಡಿಗೆ ನಡೆದು ಹೋಗುತ್ತದ್ದ ಆಕೆಯ ಹಿಂದೆ ಹೋದ ರಾಮ್ ಆಕೆಯ ಧರಿಸಿದ್ದ ಬಟ್ಟೆ ಎಳೆದು ಹಾಕಿದ್ದಲ್ಲದೇ ಆಕೆಯನ್ನು ಅಸಭ್ಯವಾಗಿ ಮುಟ್ಟಿ ಹಿಂಸಿಸಿದ್ದಾನೆ.   

ಏಕಾ ಏಕಿ ಆತ ಈ ರೀತಿ ನಡೆಯಿಂದ ಶಾಕ್ ಆದ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಮುಂದಿನ ಪರಿಣಾಮವನ್ನು ಅರಿತ ಆತ  ಲ್ಲಿಂದ ಪೇರಿ ಕೀಳಲು ಯತ್ನಿಸಿದ್ದಾನೆ.  ಆದ್ರೆ ಅಷ್ಟರಲ್ಲೇ ಜನರನ್ನು ಸೇರಿದ್ದು, ಪೊಲೀಸರಿಗೆ ಕರೆ ಮಾಡಿದ್ದಾರೆ. 

ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆತನ್ನು ಬಂಧಿಸಿ ಎಳೆದೊಯ್ದಿದ್ದಾರೆ.  ಸದ್ಯ ಈತನ ವಿರುದ್ಧ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಚಾರ್ಕೋಪ್ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಪ್ರಮೋದ್ ದವಾರೆ ಹೇಳಿದ್ದಾರೆ.