ವಿಮಾನದ ಊಟದಲ್ಲಿ ಜಿರಳೆ : 87 ಲಕ್ಷ ಪರಿಹಾರ ಕೇಳಿದ ಮುಂಬೈ ವಕೀಲ

First Published 1, Apr 2018, 11:42 AM IST
Mumbai man finds Cockroach in in Flight meal  demands Rs 87 lakh from Emirates
Highlights

ಮುಂಬೈನ ವಕೀಲರೋರ್ವರು ಎಮಿರೇಟ್ಸ್ ಅಂತಾರಾಷ್ಟ್ರೀಯ ವಿಮಾನದ ಊಟದಲ್ಲಿ ಜಿರಳೆ ಸಿಕ್ಕಿದ್ದ ಹಿನ್ನೆಲೆಯಲ್ಲಿ 87 ಲಕ್ಷ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮುಂಬೈ : ಮುಂಬೈನ ವಕೀಲರೋರ್ವರು ಎಮಿರೇಟ್ಸ್ ಅಂತಾರಾಷ್ಟ್ರೀಯ ವಿಮಾನದ ಊಟದಲ್ಲಿ ಜಿರಳೆ ಸಿಕ್ಕಿದ್ದ ಹಿನ್ನೆಲೆಯಲ್ಲಿ 87 ಲಕ್ಷ ನೀಡಬೇಕೆಂದು ಆಗ್ರಹಿಸಿದ್ದಾರೆ.

ಊಟದಲ್ಲಿ ಜಿರಳೆ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಅತ್ಯಂತ ಹಿಂಸೆಯನ್ನು ಅನುಭವಿಸಿದ್ದಾಗಿಯೂ ಕೂಡ ತಿಳಿಸಿದ್ದಾರೆ. ಯೂಸುಫ್ ಇಕ್ಬಾಲ್ ಎಂಬ  ವ್ಯಕ್ತಿ ಮೊರಾಕ್ಕೋದಿಂದ ಮುಂಬೈಗೆ ಮೊದಲ ದರ್ಜೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಫೆ.27 ರಂದು  ಪ್ರಯಾಣ ಮಾಡಿದ್ದು, ಈ ವೇಳೆ  ವಿಮಾನದಲ್ಲಿ ನೀಡಲಾದ ಸಲಾಡ್’ನಲ್ಲಿ ಜಿರಳೆ ಕಂಡಿದೆ.

ಈ ಹಿನ್ನೆಲೆಯಲ್ಲಿ 87 ಲಕ್ಷ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಲಂಡನ್ ಮೂಲದ ಜೂರಿಸ್ಟ್ ಕೌನ್ಸಿಲ್’ನಲ್ಲಿ ಕಳೆದ 17 ವರ್ಷಗಳಿಂದ ಇಕ್ಬಾಲ್ ಅವರು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ತಮ್ಮ ಜನ್ಮ ದಿನವನ್ನು ಆಚರಣೆ ಮಾಡುವ ಹಿನ್ನೆಲೆಯಲ್ಲಿ ಅವರು ತಮ್ಮ ಗೆಳೆಯರೊಂದಿಗೆ ಸೇರಿ ಪ್ರಯಾಣ ಮಾಡುತ್ತಿದ್ದರು.

loader