ಮುಂಬೈ[ಮಾ.14] ಮುಂಬೈನಲ್ಲಿ ರೈಲ್ವೆ ನಿಲ್ದಾಣದ ಪಾದಚಾರಿ ಸೇತುವೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು  23 ಜನರು ಗಾಯಗೊಂಡಿದ್ದಾರೆ ಎಂದು ಸದ್ಯಕ್ಕೆ ಮಾಹಿತಿ ಲಭ್ಯವಾಗಿದೆ.

ಛತ್ರಪತಿ ಶಿವಾಜಿ ಟೆರ್ಮಿನಸ್ ರೈಲ್ವೆ ನಿಲ್ದಾಣದ ಹೊರಭಾಗದ ಪಾದಚಾರಿ ಸೇತುವೆ ಕುಸಿದಿದೆ. ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. 

ಆಜಾದ್ ಮೈದಾನ್ ಪೊಲೀಸ್ ಠಾಣೆ, ಟೈಮ್ಸ್‌ ಆಫ್ ಇಂಡಿಯಾ ಕಟ್ಟಡವನ್ನು ರೈಲ್ವೆ ನಿಲ್ದಾಣದೊಂದಿಗೆ ಈ ಸೇತುವೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿದೆ.

2017ರಲ್ಲಿ ಮುಂಬೈನ ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತ ಸಂಭವಿಸಿ 22 ಜನರು ಸಾವನ್ನಪ್ಪಿದ್ದರು.  ನಿಲ್ದಾಣದಲ್ಲಿರುವ ಮೇಲ್ಸೇತುವೆ (ಫೂಟ್ ಓವರ್ ಬ್ರಿಜ್) ಬಳಿ ಬೆಳಗ್ಗೆ 10:30ಕ್ಕೆ ಸಂಭವಿಸಿದ ಈ ದುರಂತ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಾ ಕ್ರಮ ಅಳವಡಿಸಿಕೊಂಡಿಲ್ಲ ಎಂಬುದನ್ನು ಸಾರಿ ಹೇಳಿತ್ತು.