18ನೇ ಆವೃತ್ತಿಯ ಮುಂಬೈ ಚಲನಚಿತ್ರೋತ್ಸವವು ಅಕ್ಟೋಬರ್ 20-27ರ ವರೆಗೆ ನಡೆಯಲಿದ್ದು 54 ದೇಶಗಳಿಂದ 180 ಸಿನೆಮಾಗಳು ನಗರದ ಪ್ರಮುಖ ಕೇಂದ್ರಗಳಲ್ಲಿ ತೆರೆಕಾಣಲಿದೆ.
ನವದೆಹಲಿ(ಅ.17): ಪಾಕಿಸ್ತಾನಿ ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ನಿರ್ಮಾಪಕರ ಸಂಘವು ಬಹಿಷ್ಕಾರ ಹಾಕಿದ ಬೆನ್ನಲ್ಲೇ ಮುಂಬೈ ಚಲನಚಿತ್ರೋತ್ಸವದಲ್ಲಿ ಪಾಕಿಸ್ತಾನದ ಚಿತ್ರಗಳನ್ನು ಬಹಿಷ್ಕರಿಸಲು ಮುಂಬೈ ಅಕಾಡಮಿಕ್ ಆಫ್ ಮೂವಿಂಗ್ ಇಮೇಜ್ ನಿರ್ಧರಿಸಿದೆ.
ಈ ವರ್ಷದ ಮುಂಬೈ ಚಲನಚಿತ್ರೋತ್ಸವದಲ್ಲಿ ಪಾಕಿಸ್ತಾನದ ಯಾವುದೇ ಚಿತ್ರವನ್ನು ಪ್ರದರ್ಶಿಸದಿರಲು ನಿರ್ಧರಿಸಿದೆ ಎಂದು ಎಎನ್ಐ ವರದಿ ಮಾಡಿದೆ.
18ನೇ ಆವೃತ್ತಿಯ ಮುಂಬೈ ಚಲನಚಿತ್ರೋತ್ಸವವು ಅಕ್ಟೋಬರ್ 20-27ರ ವರೆಗೆ ನಡೆಯಲಿದ್ದು 54 ದೇಶಗಳಿಂದ 180 ಸಿನೆಮಾಗಳು ನಗರದ ಪ್ರಮುಖ ಕೇಂದ್ರಗಳಲ್ಲಿ ತೆರೆಕಾಣಲಿದೆ.
ಸೆಪ್ಟೆಂಬರ್ 18ರಂದು ಉರಿ ದಾಳಿಯಲ್ಲಿ ಪಾಕ್ ಮೂಲದ ಭಯೋತ್ಪಾದಕರು 19 ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದರು. ಇದಾದ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ಬಿಗಡಾಯಿಸಿದೆ. ಕಳೆದ ಶುಕ್ರವಾರವಷ್ಟೇ ಸಿನೆಮಾ ನಿರ್ಮಾಪಕರ ಹಾಗೂ ಪ್ರಾಯೋಜಕರ ತಂಡ ಫವಾದ್ ಖಾನ್ ಅಭಿನಯದ 'ಏ ದಿಲ್ ಮುಷ್ಕಿಲ್' ಎಂಬ ಸಿನೆಮಾವನ್ನು ಬಹಿಷ್ಕರಿಸಿದೆ.