ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆದ ಓಲಾ ಡ್ರೈವರ್| ಹುಟ್ಟು ಹಬ್ಬದಂದು ಪ್ರಯಾಣಿನಿಗೆ ಸಿಕ್ತು ಬಿಗ್ ಸರ್ಪ್ರೈಸ್ !

ಮುಂಬೈ[ಜೂ.14]: ಮುಂಬೈನ ಕ್ಯಾಬ್ ಚಾಲಕನೊಬ್ಬನ ಪ್ರಾಮಾಣಿಕತೆ ಸದ್ಯ ಸೋಶಿಯಲ್ ಮೀಡಿಯಾ ಬಳಕೆದಾರರ ಹೃದಯ ಕದ್ದಿದೆ. ಓಲಾ ಡ್ರೈವರ್ ಕೆಲಸ ಕೇಳಿದರೆ ನಿಮ್ಮ ಮುಖದಲ್ಲೂ ನಗು ಮೂಡುವುದರಲ್ಲಿ ಅನುಮಾನವಿಲ್ಲ. ಅಷ್ಟಕ್ಕೂ ಆತ ಮಾಡಿದ್ದೇನು? ಇಲ್ಲಿದೆ ವಿವರ

Scroll to load tweet…

ಟ್ವಿಟರ್ ಬಳಕೆದಾರ @DarthSierra ಎಂಬವರು ಓಲಾ ಕ್ಯಾಬ್ ಡ್ರೈವರ್ ಅಬ್ದುಲ್ ಗಫರ್ ಪಠಾಣ್ ಬೇಟಿಯ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಓದಿದ ಟ್ವಿಟರ್ ಬಳಕೆದಾರರು ಓಲಾ ಕ್ಯಾಬ್ ಡ್ರೈವರ್ ಅಬ್ದುಲ್ ರನ್ನು ಹಾಡಿ ಹೊಗಳುತ್ತಿದ್ದಾರೆ. ತನ್ನ ಕ್ಯಾಬ್ ನಲ್ಲಿ ಕುಳಿತಿದ್ದ ಪ್ರಯಾಣಿಕ ಪರ್ಸ್ ಮರೆತು ತೆರಳಿರುವುದನ್ನು ಗಮನಿಸಿದ ಅಬ್ದುಲ್, ಇದನ್ನು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. 

Scroll to load tweet…

ಈ ಕುರಿತಾಗಿ ಬರೆದುಕೊಂಡಿರುವ ಪಾಪಾ ಸಿಯೇರಾ 'ಓಲಾ ಕ್ಯಾಬ್ ನಲ್ಲಿ ನಡೆದ ಒಂದು ಘಟನೆಯನ್ನು ಶೇರ್ ಮಾಡಲಿಚ್ಛಿಸುತ್ತೇನೆ. ನಾನು ನಿಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕ ಆಸೀಫ್ ಇಕ್ಬಾಲ್ ಅಬ್ದುಲ್ ಗಫರ್ ಪಠಾಣ್ ಎಂಬವರನ್ನು ಭೇಟಿಯಾಗಿದ್ದೆ. ಅವರು ಹುಂಡೈ ಎಕ್ಸೆಟ್ ಕಾರನ್ನು ಚಲಾಯಿಸುತ್ತಾರೆ' ಎಂದು ಓಲಾ ಕ್ಯಾಬ್ ಅಧಿಕೃತ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.

Scroll to load tweet…

ಇದಾದ ಬಳಿಕ ಮುಂದಿನ ಟ್ವೀಟ್ ನಲ್ಲಿ ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ 'ನಾನು ಹಾಗೂ ನನ್ನ ಹೆಂಡತಿ 2019ರ ಜೂನ್ 10ರಂದು ಸಂಜೆ ನನ್ನ ಮನೆ, ಹೀರನಂದಾನಿ ಪೋವಯೀನಿಂದ ಕ್ಯಾಬ್ ಬುಕ್ ಮಾಡಿದ್ದೆವು. ಅಂದು ನನ್ನ ಜನ್ಮದಿನವಾಗಿತ್ತು. ಹೀಗಾಗಿ ನಾವು ಪಬ್ ಗೆ ತೆರಳುತ್ತಿದ್ದೆವೆ. ಹೀಗಿರುವಾಗಲೇ ಮಳೆ ಆರಂಭವಾಗಿತ್ತು.

Scroll to load tweet…

'ಈ ವೇಳೆ ಡ್ರೈವರ್ ತನ್ನ ಮನೆಗೆ ಕರೆ ಮಾಡಿ, ಮಕ್ಕಳನ್ನು ಮಳೆಯಲ್ಲಿ ನೆನೆಯಲು ಬಿಡದಂತೆ ಹೆಂಡತಿಗೆ ಹೇಳುತ್ತಿದ್ದ. ಆತ ಕರೆ ಕಟ್ ಮಾಡಿದ ಬಳಿಕ ನಾವು ಕೂಡಾ ಆತನ ಬಳಿ ಮೊದಲ ಮಳೆ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಹಾಗೂ ಮಳೆಗಾಲದಲ್ಲಿ ವಾಹನಗಳನ್ನು ಎಚ್ಚರಿಕೆಯಿಂದ ಚಲಾಯಿಸಬೇಕು ಎಂಬಿತ್ಯಾದಿ ವಿಚಾರದ ಬಗ್ಗೆ ಮಾತನಾಡಿದೆವು. ಅಷ್ಟರಲ್ಲಿ ನಾವು ತಲುಪಬೇಕಾದ ಸ್ಥಳ ಬಂದಿತ್ತು'.

'ಕಾರಿನಿಂದ ಇಳಿದ ನಾವು ಆತನಿಗೆ ಥ್ಯಾಂಕ್ಸ್ ಹೇಳಿ ಗೆಳೆಯರನ್ನು ಭೇಟಿಯಾಗಲು ಪಬ್ ನೊಳಗೆ ತೆರಳಿದೆವು. ಸುಮಾರು ಒಂದು ಗಂಟೆ ಬಳಿಕ ನನ್ನ ಬಳಿ ಪರ್ಸ್ ಇಲ್ಲ ಎಂಬ ವಿಚಾರ ನನ್ನ ಅರಿವಿಗೆ ಬಂತು. ನನಗೆ ಬಹಳ ಗಾಬರಿ ಆಯ್ತು. ಬಹುಶಃ ನಾನು ನನ್ನ ಪರ್ಸ್ ಕ್ಯಾಬ್ ನಲ್ಲೇ ಬಿಟ್ಟಿರಬಹುದು ಎಂದು ಕ್ಯಾಬ್ ಡ್ರೈವರ್ ಗೆ ಕರೆ ಮಾಡಿ ಪರಿಶೀಲಿಸಲು ತಿಳಿಸಿದೆ’.

Scroll to load tweet…

’ಕೂಡಲೇ ಕರೆ ಸ್ವೀಕರಿಸಿದ ಡ್ರೈವರ್ ಪರ್ಸ್ ತನ್ನ ಬಳಿಯೇ ಇದೆ, ಹೆದರಬೇಡಿ ಎಂದು ತಿಳಿಸಿದ. ಅಲ್ಲದೇ ತಾನು ಮನೆಗೆ ತೆರಳುವಾಗ ಹಸ್ತಾಂತರಿಸಿ ಹೋಗುವುದಾಗಿಯೂ ತಿಳಿಸಿದ’. 

Scroll to load tweet…

ಆದರೆ ಕತೆ ಇಲ್ಲಿಗೇ ನಿಲ್ಲುವುದಿಲ್ಲ ಯಾಕೆಂದರೆ ಸಿಯೇರಾಗೆ ರಿಯಲ್ ಸರ್ಪ್ರೈಸ್ ಸಿಕ್ಕಿದ್ದೇ ಇವೆಲ್ಲದರ ಬಳಿಕ. ಹೌದು ಈ ಕುರಿತಾಗಿ ಬರೆದುಕೊಂಡಿರುವ ಬರ್ತ್ ಡೇ ಬಾಯ್ 'ಡ್ರೈವರ್ ತನ್ನ ಮಾತಿನಂತೆ ಬಂದು ನನ್ನ ಕೈಯ್ಯಲ್ಲಿ ಪರ್ಸ್ ಇಡುತ್ತಾ, ಹುಟ್ಟುಹಬ್ಬಕ್ಕೆ ವಿಶ್ ಮಾಡಿದ. ನಾನು ಆತನಿಗೆ ಧನ್ಯವಾದ ತಿಳಿಸುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಡ್ರೈವರ್ ಇಂದು ತನ್ನದು ಕೂಡಾ ಬರ್ತ್ ಡೇ, ಮನೆಯವರೆಲ್ಲಾ ಕೇಕ್ ಕಟ್ ಮಾಡಲು ನನಗಾಗಿ ಕಾಯುತ್ತಿದ್ದಾರೆ ಎಂದಿದ್ದಾನೆ. ಇಂತಹ ಪ್ರಾಮಾಣಿಕ ವ್ಯಕ್ತಿಗಳೇ ಮುಂಬೈಯನ್ನು ಮುಂಬೈಯಾಗಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.