Asianet Suvarna News Asianet Suvarna News

ಮುಂಬೈ'ನಲ್ಲಿ ಬಹು ಅಂತಸ್ತಿನ ಕಟ್ಟಡ ಕುಸಿದು 8 ಸಾವು

ಕಟ್ಟಡಗಳ ಅವಶೇಷಗಳಡಿ ಸುಮಾರು 30ಕ್ಕೂ ಹೆಚ್ಚು ಮಂದಿ ಸಿಲಿಕಿರುವ ಶಂಕೆಯಿದೆ

Mumbai building collapse 6 killed

ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 8 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 10.43ರ ಸುಮಾರಿಗೆ ಘಾಟ್ ಕೋಪರ್ ಪ್ರದೇಶದಲ್ಲಿ ದಾಮೋದರ ಪಾರ್ಕ್ ಬಳಿ ಸಾಯಿ ದರ್ಶನ ಅಪಾರ್ಟ್​ಮೆಂಟ್ ಕಟ್ಟಡ ಕುಸಿದಿದೆ. ಕಟ್ಟಡಗಳ ಅವಶೇಷಗಳಡಿ ಸುಮಾರು 30ಕ್ಕೂ ಹೆಚ್ಚು ಮಂದಿ ಸಿಲಿಕಿರುವ ಶಂಕೆಯಿದೆ.  ಅಗ್ನಿಶಾಮಕ ಸಿಬ್ಬಂದಿ, ಪೋಲಿಸರು ಮತ್ತು ಎನ್​ಡಿಆರ್​ಎಫ್ ತಂಡ  ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಕೋಲ್ಕತ್ತಾದಲ್ಲೂ ಕಟ್ಟಡ ಕುಸಿತ

ಇತ್ತ ಕೋಲ್ಕತ್ತದಲ್ಲೂ ಬೌ ಬಜಾರ್​ನ ಸೆಂಟ್ರಲ್ ತಲ್ ತಲಾ ಕಟ್ಟಡ ಕುಸಿದು ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Latest Videos
Follow Us:
Download App:
  • android
  • ios