Asianet Suvarna News Asianet Suvarna News

ಪತ್ನಿಯ ಹಠಕ್ಕೆ ಮಣಿದು ನಿಜ ಜೀವನದಲ್ಲಿ 'ಅಕ್ಷಯ್ ಕುಮಾರ್' ಆದ ಆಟೋ ಡ್ರೈವರ್!: ಮಾಡಿದ್ದೇನು?

ಇತ್ತೀಚೆಗಷ್ಟೇ 'ಟಾಯ್ಲೆಟ್ ಏಕ್ ಪ್ರೇಮ್ ಕಹಾನಿ' ಹೆಸರಿನಿ ಸಿನಿಮಾವೊಂದು ತೆರೆ ಕಂಡಿತ್ತು, ಇದನ್ನು ಹಲವಾರು ಮಂದಿ ಇಷ್ಟ ಪಟ್ಟಿದ್ದರು. ಈ ಸಿನಿಮಾದಲ್ಲಿ ಮನೆಗೊಂದು ಶೌಚಾಲಯ ಇಲ್ಲದಿರುವುದರಿಂದ ಮದುಮಗಳೊಬ್ಬಳು, ತನ್ನ ಗಂಡನ ಮನೆ ತೊರೆದು ತವರು ಮನೆಗೆ ಹೋಗಿದ್ದು, ಶೌಚಾಲಯ ಕಟ್ಟಿಸುವವರೆಗೂ ವಾಪಾಸಾಗುವುದಿಲ್ಲ. ಸದ್ಯ ಇಂತಹುದೇ ಪ್ರಕರಣವೊಂದು ಮುಂಬೈನಲ್ಲಿ ವರದಿಯಾಗಿದೆ. ಇಲ್ಲಿ ಆಟೋ ಡ್ರೈವರ್ ಪತ್ನಿಯೊಬ್ಬಳು ಊರಿನಲ್ಲಿ ಶೌಚಾಲಯ ಕಟ್ಟಿಸವವರೆಗೆ ಹಿಂತಿರುವುದಿಲ್ಲವೆಂದು ಹೇಳಿ ಗಂಡನನ್ನು ತೊರೆದು ತವರು ಮನೆಗೆ ತೆರಳಿದ್ದಾಳೆ ಕೆಗೆ ಮಗಳೂ ಸಾಥ್ ನೀಡಿದ್ದಾಳೆ. ಪತ್ನಿ ಹಾಗೂ ಮಗಳ ಈ ನಿರ್ಧಾರದ ಬಳಿಕ ಟೋ ಡ್ರೈವರ್ ಪತಿ ಕೂಡಾ, ಬ್ಯಾಂಕ್ ಸಾಲ ಪಡೆದಾದರೂ ಊರಿನಲ್ಲಿ ಶೌಚಾಲಯಗಳನ್ನು ನಿರ್ಮಿಸುವುದಾಗಿ ಪಣತೊಟ್ಟಿದ್ದಾರೆ.

mumbai auto driver decides to make toilet in village

ಮುಂಬೈ(ಅ.07): ಇತ್ತೀಚೆಗಷ್ಟೇ 'ಟಾಯ್ಲೆಟ್ ಏಕ್ ಪ್ರೇಮ್ ಕಹಾನಿ' ಹೆಸರಿನಿ ಸಿನಿಮಾವೊಂದು ತೆರೆ ಕಂಡಿತ್ತು, ಇದನ್ನು ಹಲವಾರು ಮಂದಿ ಇಷ್ಟ ಪಟ್ಟಿದ್ದರು. ಈ ಸಿನಿಮಾದಲ್ಲಿ ಮನೆಗೊಂದು ಶೌಚಾಲಯ ಇಲ್ಲದಿರುವುದರಿಂದ ಮದುಮಗಳೊಬ್ಬಳು, ತನ್ನ ಗಂಡನ ಮನೆ ತೊರೆದು ತವರು ಮನೆಗೆ ಹೋಗಿದ್ದು, ಶೌಚಾಲಯ ಕಟ್ಟಿಸುವವರೆಗೂ ವಾಪಾಸಾಗುವುದಿಲ್ಲ. ಸದ್ಯ ಇಂತಹುದೇ ಪ್ರಕರಣವೊಂದು ಮುಂಬೈನಲ್ಲಿ ವರದಿಯಾಗಿದೆ. ಇಲ್ಲಿ ಆಟೋ ಡ್ರೈವರ್ ಪತ್ನಿಯೊಬ್ಬಳು ಊರಿನಲ್ಲಿ ಶೌಚಾಲಯ ಕಟ್ಟಿಸವವರೆಗೆ ಹಿಂತಿರುವುದಿಲ್ಲವೆಂದು ಹೇಳಿ ಗಂಡನನ್ನು ತೊರೆದು ತವರು ಮನೆಗೆ ತೆರಳಿದ್ದಾಳೆ ಕೆಗೆ ಮಗಳೂ ಸಾಥ್ ನೀಡಿದ್ದಾಳೆ. ಪತ್ನಿ ಹಾಗೂ ಮಗಳ ಈ ನಿರ್ಧಾರದ ಬಳಿಕ ಟೋ ಡ್ರೈವರ್ ಪತಿ ಕೂಡಾ, ಬ್ಯಾಂಕ್ ಸಾಲ ಪಡೆದಾದರೂ ಊರಿನಲ್ಲಿ ಶೌಚಾಲಯಗಳನ್ನು ನಿರ್ಮಿಸುವುದಾಗಿ ಪಣತೊಟ್ಟಿದ್ದಾರೆ.

ಈ ಕುರಿತಾಗಿ ಆಟೋ ಡ್ರೈವರ್ 'ಹ್ಯೂಮನ್ಸ್ ಆಫ್ ಬಾಂಬೆ' ಎಂಬ ಫೇಸ್'ಬುಕ್ ಪೇಜ್'ನಲ್ಲಿ 'ಇದೊಂದು ಪುಟ್ಟ ಕನಸೆಂದು ನನಗೆ ತಿಳಿದಿದೆ, ಆದರೀಗ ಇದೇ ಕನಸು ನನಗೆ ಸರ್ವಸ್ವವಾಗಿದೆ' ಎಂದು ಬರೆದುಕೊಂಡಿದ್ದಾರೆ. ಈ ಆಟೋ ಡ್ರೈವರ್'ನ ಇಂತಹ ಯೋಚನೆ ನಿಜಕ್ಕೂ ಪ್ರೇರಣಾದಾಯಕ. ಈತ ತನ್ನ ಕನಸನ್ನು ವಿಶ್ಲೇಷಿಸಿರುವ ರೀತಿ ನೋಡಿದರೆ ಯಾರೇ ಆಗಲಿ ಮರುಕಪಡುವುದರಲ್ಲಿ ಅನುಮಾನವಿಲ್ಲ. 'ತಾನು ಮುಂಬೈ ನಿವಾಸಿ ಎಂದು ಹೇಳಿಕೊಂಡಿದ್ದಾರಾದರೂ ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ತನ್ನ ಪತ್ನಿ ಹಾಗೂ ಮಗಳು ನಮ್ಮ ಊರಿನಲ್ಲಿ ಮೂಲಭೂತ ಸೌಕರ್ಯ ಹಾಗೂ ಶೌಚಾಲಯ ಇಲ್ಲದಿರುವುದರಿಂದ ನನ್ನನ್ನು ತೊರೆದು ಹೋಗಿದ್ದಾರೆ' ಎಂದು ತಿಳಿಸಿದ್ದಾರೆ.

ಮುಂದೆ ಬರೆದುಕೊಂಡಿರುವ ಅವರು 'ನನ್ನ ಪತ್ನಿ ಹಾಗೂ ಮಗಳು ಕೇವಲ ರಾತ್ರಿಯಷ್ಟೇ ಶೌಚಕ್ಕೆ ತೆರಳಬಹುದು, ಯಾಕೆಂದರೆ ಆ ವೇಳೆ ಮಾತ್ರ ಅವರ ಮೇಲೆ ಯಾರ ದೃಷ್ಟಿ ಬೀಳುವುದಿಲ್ಲ. ಇದನ್ನು ಯೋಚಿಸಿ ನಾನು ಬಹಳಷ್ಟು ಚಿಂತೆಗೀಡಾಗಿದ್ದೇನೆ' ಎಂದಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಹಳ್ಳಿಯಲ್ಲಿ ಶಛಚಾಲಯ ನಿರ್ಮಿಸಲು ಬ್ಯಾಂಕ್'ನಿಂದ ಲೋನ್ ಪಡೆಯಲು ಇವರು ಈಗಾಗಲೇ ನಿರ್ಧರಿಸಿದ್ದಾರೆ. ಪತ್ನಿ ಹಾಗೂ ಮಗಳಿಗೆ ಸ್ವಚ್ಛ ಶೌಚಾಲಯದ ವ್ಯವಸ್ಥೆ ಮಾಡುವುದೇ ಅವರ ಲಕ್ಷ್ಯವಾಗಿದೆ.

ಫೇಸ್'ಬುಕ್'ನಲ್ಲಿ ಈ ಪೋಸ್ಟ್ ಬಹಳಷ್ಟು ವೈರಲ್ ಆಗಿದ್ದು, ಪ್ರೇಕ್ಷಕರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios