Asianet Suvarna News Asianet Suvarna News

ವಿಶ್ವದ 100 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮುಂಬೈ, ದೆಹಲಿ!

ವಿಶ್ವದ 100 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮುಂಬೈ, ದೆಹಲಿ| ಐದು ಖಂಡಗಳ ಒಟ್ಟು 60 ದೇಶಗಳ ಪ್ರಮುಖ ನಗರಗಳ ಸುರಕ್ಷತೆ, ತಂತ್ರಜ್ಞಾನ, ಮೂಲ ಸೌಕರ್ಯ, ಆರೋಗ್ಯ ಹಾಗೂ ವೈಯಕ್ತಿಕ ಸುರಕ್ಷತೆ ಆಧಾರದಲ್ಲಿ ಪಟ್ಟಿ

Mumbai and New Delhi only Indian cities on Safe Cities list 2019
Author
Bangalore, First Published Aug 30, 2019, 11:35 AM IST

ನವದೆಹಲಿ[ಆ.30]: ವಿಶ್ವದ ಸುರಕ್ಷಿತ ನಗರಗಳ ಪಟ್ಟಿಬಿಡುಗಡೆಯಾಗಿದ್ದು ಭಾರತದ ಎರಡು ನಗರಗಳು ಅಗ್ರ ನೂರರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆರ್ಥಿಕ ಗುಪ್ತಚರ ಘಟಕ ಸಿದ್ಧಪಡಿಸಿರುವ ವರದಿ ಇದಾಗಿದ್ದು, ಮುಂಬೈ 45 ಹಾಗೂ ದೆಹಲಿ 52ನೇ ಸ್ಥಾನವನ್ನು ಪಡೆದಿವೆ.ಕರ್ನಾಟಕದ ಯಾವುದೇ ನಗರದ ಹೆಸರು ಪಟ್ಟಿಯಲ್ಲಿಲ್ಲ.

ಐದು ಖಂಡಗಳ ಒಟ್ಟು 60 ದೇಶಗಳ ಪ್ರಮುಖ ನಗರಗಳ ಸುರಕ್ಷತೆ, ತಂತ್ರಜ್ಞಾನ, ಮೂಲ ಸೌಕರ್ಯ, ಆರೋಗ್ಯ ಹಾಗೂ ವೈಯಕ್ತಿಕ ಸುರಕ್ಷತೆ ಆಧಾರದಲ್ಲಿ ಈ ಪಟ್ಟಿತಯಾರಿಸಲಾಗಿದ್ದು, ಟೋಕಿಯೋ ಅಗ್ರಸ್ಥಾನ ಪಡೆದಿದೆ. ಸಿಂಗಾಪುರ ಹಾಗೂ ಒಸಾಕ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದು ಸಿಡ್ನಿ ಹಾಗೂ ಮೆಲ್ಬರ್ನ್‌ ಟಾಪ್‌-10 ರಲ್ಲಿ ಜಾಗ ಪಡೆದಿವೆ. ಏಷ್ಯಾ-ಪೆಸಿಫಿಕ್‌ ರಾಷ್ಟ್ರಗಳ ನಗರಗಳೇ ಈ ಬಾರಿಯ ಮೊದಲ ಹತ್ತು ಸ್ಥಾನ ಅಲಂಕರಿಸಿರುವುದು ವಿಶೇಷ.

ಟಾಪ್‌-10 ಸುರಕ್ಷಿತ ನಗರಗಳು

1. ಟೋಕಿಯೋ, ಜಪಾನ್‌

2. ಸಿಂಗಾಪುರ, ಸಿಂಗಾಪುರ

3. ಒಸಾಕ, ಜಪಾನ್‌

4. ಆಮ್ಸೆ$್ಟರ್‌ಡ್ಯಾಂ, ನೆದರ್‌ಲ್ಯಾಂಡ್‌

5. ಸಿಡ್ನಿ, ಆಸ್ಪ್ರೇಲಿಯಾ

6. ಟೊರೆಂಟೋ, ಕೆನಡಾ

7. ವಾಷಿಂಗ್ಟನ್‌ ಡಿಸಿ, ಅಮೆರಿಕ

8. ಕೋಪೆನ್‌ಹ್ಯಾಗನ್‌, ಡೆನ್ಮಾರ್ಕ್

9. ಸಿಯೋಲ್‌, ದಕ್ಷಿಣ ಕೊರಿಯಾ

10. ಮೆಲ್ಬರ್ನ್‌, ಆಸ್ಟೇಲಿಯಾ

Follow Us:
Download App:
  • android
  • ios