ಮುಂಬೈ ವಿಮಾನ ನಿಲ್ದಾಣ ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ. ಒಂದೇ ದಿನದಲ್ಲಿ 1000ಕ್ಕೂ ಅಧಿಕ ವಿಮಾನಗಳ ಆಗಮನ, ಹೊರಡುವಿಕೆ ಪ್ರಕ್ರಿಯೆ ನಿಭಾಯಿಸಿದ ಸಾರ್ವಕಾಲಿಕ ದಾಖಲೆ ಮುಂಬೈ ವಿಮಾನ ನಿಲ್ದಾಣ ದಾಖಲಿಸಿದೆ. 

ಮುಂಬೈ: ಮುಂಬೈ ವಿಮಾನ ನಿಲ್ದಾಣ ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ. ಒಂದೇ ದಿನದಲ್ಲಿ 1000ಕ್ಕೂ ಅಧಿಕ ವಿಮಾನಗಳ ಆಗಮನ, ಹೊರಡುವಿಕೆ ಪ್ರಕ್ರಿಯೆ ನಿಭಾಯಿಸಿದ ಸಾರ್ವಕಾಲಿಕ ದಾಖಲೆ ಮುಂಬೈ ವಿಮಾನ ನಿಲ್ದಾಣ ದಾಖಲಿಸಿದೆ.

ಮಂಗಳವಾರ 24 ಗಂಟೆಗಳಲ್ಲಿ 1,003 ವಿಮಾನಗಳ ಹಾರಾಟ, ಆಗಮನ ಪ್ರಕ್ರಿಯೆಯನ್ನು ಮುಂಬೈ ವಿಮಾನ ನಿಲ್ದಾಣ ನಿರ್ವಹಿಸಿತು ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಕ್ತಾರ ತಿಳಿಸಿದ್ದಾರೆ.

ಈ ಹಿಂದೆ ಒಂದೇ ದಿನ 988 ವಿಮಾನಗಳನ್ನು ನಿರ್ವಹಿಸಿದ್ದ ಹೆಗ್ಗಳಿಕೆ ಈ ವಿಮಾನ ನಿಲ್ದಾಣಕ್ಕಿತ್ತು. ಪ್ರಾಥಮಿಕ ರನ್‌ವೇನಲ್ಲಿ ಗಂಟೆಗೆ 48 ಮತ್ತು ಎರಡನೇ ರನ್‌ವೇನಲ್ಲಿ 35 ವಿಮಾನಗಳನ್ನು ನಿರ್ವಹಿಸಬಹುದಾಗಿದೆ.