ಮುಲಾಯಂ ಸಿಂಗ್ ಯಾದವ್ ಅವರು ಡಿ.30 ರಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ರಾಮಗೋಪಾಲ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಿ ನಂತರ ಡಿ.31 ರಂದು ಉಚ್ಚಾಟನೆಯನ್ನು ರದ್ದುಗೊಳಿಸಿದ್ದರು.

ಲಕ್ನೋ (ಜ.01): ಸಮಾಜವಾದಿ ಪಕ್ಷದಲ್ಲಿ ‘ಉಚ್ಛಾಟನೆ’ ರಾಜಕೀ ಮುಂದುವರೆದಿದೆ. ಇನ್ನೊಂದು ನಾಟಕೀಯ ಬೆಳವಣಿಗೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮಗೋಪಾಲ್ ಯಾದವ್’ರನ್ನು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮತ್ತೊಮ್ಮೆ ಉಚ್ಛಾಡಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರು ಡಿ.30 ರಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ರಾಮಗೋಪಾಲ್ ಯಾದವ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಿ ನಂತರ ಡಿ.31 ರಂದು ಉಚ್ಚಾಟನೆಯನ್ನು ರದ್ದುಗೊಳಿಸಿದ್ದರು.

ಆ ಬಳಿಕ ಇಂದು ಬೆಳಗ್ಗೆ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಕರೆದಿದ್ದ ರಾಮಗೋಪಾಲ್, ಪಕ್ಷವು ಅಖಿಲೇಶ್ ಯಾದವ್ ಅವರನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದಉ ಘೋಷಿಸಿದ್ದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಸಮಾಲೋಚಿಸದೇ ರಾಮಗೋಪಾಲ್ ಕರೆದಿರುವ ಸಭೆಯು ಅಸಾಂವಿಧಾನಿಕವಾಗಿದೆ, ಹಾಗೂ ಆ ಸಭೆಯ ನಿರ್ಣಯಗಳಿಗೂ ಯಾವುದೇ ಬೆಲೆಯಿಲ್ಲವೆಂದಿರುವ ಮುಲಾಯಂ ಸಿಂಗ್ ರಾಮಗೋಪಾಲ್ ಅವರನ್ನು ಇನ್ನೊಮ್ಮೆ 6 ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಛಾಟಿಸಿದ್ದಾರೆ.

ಈ ಮೂಲಕ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ತಾನೇ ಆಗಿದ್ದೇನೆಂದು ಮುಲಾಯಂ ಸಿಂಗ್ ಸ್ಪಷ್ಟಪಡಿಸಿದ್ದಾ