ಸಮಾಜವಾದಿ ಪಕ್ಷದ ಹಾಲಿ ಅಧ್ಯಕ್ಷ ಹಾಗೂ ಪುತ್ರ ಅಖಿಲೇಶ್ ಜತೆಗೆ ಮುಲಾಯಂ ಹಾಗೂ ಶಿವಪಾಲ್ ಅವರ ತಿಕ್ಕಾಟ ತೀವ್ರಗೊಂಡಿದೆ.

ನವದೆಹಲಿ(ಸೆ.20): ಈ ತಿಂಗಳ ಅಂತ್ಯಕ್ಕೆ ಎಸ್‌'ಪಿ ಮುಖಂಡರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅವರ ಸೋದರ ಶಿವಪಾಲ್ ಹೊಸ ಪಕ್ಷ ಘೋಷಿಸಲಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಸಮಾಜವಾದಿ ಪಕ್ಷದ ಹಾಲಿ ಅಧ್ಯಕ್ಷ ಹಾಗೂ ಪುತ್ರ ಅಖಿಲೇಶ್ ಜತೆಗೆ ಮುಲಾಯಂ ಹಾಗೂ ಶಿವಪಾಲ್ ಅವರ ತಿಕ್ಕಾಟ ತೀವ್ರಗೊಂಡಿದೆ. ಇದರ ಪರಿಣಾಮ ಎಸ್‌'ಪಿಯಿಂದ ಇಬ್ಬರೂ ಸೋದರರು ಹೊರಬಂದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂದು ಗೊತ್ತಾಗಿದೆ.

ಮುಲಾಯಂ-ಶಿವಪಾಲ್ ನಡೆಯಿಂದ ಅಖಿಲೇಶ್ ಹಾದಿ ದುರ್ಗಮವಾಗಲಿದ್ದು, ಯುಪಿ ರಾಜಕೀಯ ಚಿತ್ರಣವೇ ಬದಲಾಗಲಿದೆ.