ಡಿಸೆಂಬರ್'ನಲ್ಲಿ ಮುಖೇಶ್ ಅಂಬಾನಿ ಪುತ್ರಿ ಇಶಾ ವಿವಾಹ

Mukesh Ambanis Daughter Isha Ambani To Marry Anand Piramal In December
Highlights

ಇಶಾ ಹಾಗೂ ಆನಂದ್ ಕುಟುಂಬಗಳು 4 ವರ್ಷಗಳಿಂದ ಚಿರಪರಿಚಿತರು ಜೊತೆಗೆ ಸ್ನೇಹಿತರು ಕೂಡ.  33 ವರ್ಷದ ಆನಂದ್ 26 ವರ್ಷದ ಇಶಾಗೆ ಮಹಾರಾಷ್ಟ್ರದ ಮಹಬಲೇಶ್ವರ ದೇಗುಲದಲ್ಲಿ ಪ್ರೇಮವನ್ನು ನಿವೇದಿಸಿದ್ದರು. ಇದಕ್ಕೆ ಇಶಾ ತಕ್ಷಣವೇ ಒಪ್ಪಿಗೆ ನೀಡಿದ್ದರು.

ಮುಂಬೈ(ಮೇ.06): ಶತಕೋಟ್ಯಾಧಿಪತಿ, ಭಾರತದ ನಂ.1 ಉದ್ಯಮಿ ಮುಖೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಅವರ ವಿವಾಹ  ಖ್ಯಾತ ಉದ್ಯಮಿ ದಂಪತಿ ಅಜೆಯ್ ಪಿರಮಾಳಾ ಹಾಗೂ ಸ್ವಾತಿ ಪಿರಮಾಳ್ ಅವರ ಪುತ್ರ ಆನಂದ್ ಪಿರಮಾಳ್ ಅವರೊಂದಿಗೆ ಡಿಸೆಂಬರ್'ನಲ್ಲಿ ನಡೆಯಲಿದೆ.
ಇಶಾ ಹಾಗೂ ಆನಂದ್ ಕುಟುಂಬಗಳು 4 ವರ್ಷಗಳಿಂದ ಚಿರಪರಿಚಿತರು ಜೊತೆಗೆ ಸ್ನೇಹಿತರು ಕೂಡ.  33 ವರ್ಷದ ಆನಂದ್ 26 ವರ್ಷದ ಇಶಾಗೆ ಮಹಾರಾಷ್ಟ್ರದ ಮಹಬಲೇಶ್ವರ ದೇಗುಲದಲ್ಲಿ ಪ್ರೇಮವನ್ನು ನಿವೇದಿಸಿದ್ದರು. ಇದಕ್ಕೆ ಇಶಾ ತಕ್ಷಣವೇ ಒಪ್ಪಿಗೆ ನೀಡಿದ್ದರು.
ಆನಂದ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಹಾರ್ವಾಡ್ ವಿವಿಯಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪೂರೖಸಿದ್ದಾರೆ. ಅಲ್ಲದೆ ಪಿರಮಾಳ್ ರಿಯಾಲಿಟಿ ಹಾಗೂ ಸ್ವಾಸ್ಥ್ಯ ಸಂಸ್ಥೆಯ ಸಂಸ್ಥಾಪಕರು. ಈ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ 40 ಸಾವಿರ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ತಂದೆ ಅಜಯ್ ಪಿರಮಾಳ್  ವಿವಿಧ ಸಂಸ್ಥೆಗಳನ್ನು ಹೊಂದಿರುವ ಪಿರಮಾಳ್  ಸಮೂಹ ಸಂಸ್ಥೆಯ ಅಧ್ಯಕ್ಷರು.  
ಇಶಾ ಅಂಬಾನಿ ಯಾಲೆ ವಿವಿಯಲ್ಲಿ ಪದವಿ ಪೂರೖಸಿದ್ದಾರೆ. ರಿಲಯನ್ಸ್ ಜಿಯೋ ಹಾಗೂ ರಿಲಯನ್ಸ್ ರಿಟೇಲ್ಸ್ ಸಂಸ್ಥೆಯ ಮಂಡಳಿಯ ಸದಸ್ಯೆ ಕೂಡ. ಪ್ರಸ್ತುತ ಸ್ಟಾನ್'ಪೋರ್ಡ್  ಬ್ಯುಸಿನೆಸ್ ಸ್ಕೂಲ್'ನಲ್ಲಿ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ  ಮುಖೇಶ್ ಅಂಬಾನಿಯ ಜೇಷ್ಠ ಪುತ್ರ  ಆಕಾಶ್ ಅಂಬಾನಿಯ ವಿವಾಹ ವಜ್ರೋದ್ಯಮಿ ಶ್ಲೋಕಾ ಮೆಹ್ತಾ ಪುತ್ರಿಯೊಂದಿಗೆ ನೆರವೇರಿತ್ತು.  

loader