ನಷ್ಟದ ಸುಳಿಗೆ ಸಿಲುಕಿರುವ ಸೋದರ ಅನಿಲ್ ಅಂಬಾನಿ ಸಹಾಯಕ್ಕೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಧಾವಿಸಿದ್ದಾರೆ.
ನವದೆಹಲಿ(ಡಿ.29): ನಷ್ಟದ ಸುಳಿಗೆ ಸಿಲುಕಿರುವ ಸೋದರ ಅನಿಲ್ ಅಂಬಾನಿ ಸಹಾಯಕ್ಕೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಧಾವಿಸಿದ್ದಾರೆ.
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ (ಆರ್‌ಕಾಮ್)ನ ಸ್ಪೆಕ್ಟ್ರಂ, ಮೊಬೈಲ್ ಟವರ್'ಗಳು ಮತ್ತು ಆಪ್ಟಿಕಲ್ ಸೈಬರ್ ನೆಟ್'ವರ್ಕ್ ಸೇರಿದಂತೆ ಮೊಬೈಲ್ ಆಸ್ತಿಗಳನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸ್ವಾಧೀನ ಪಡಿಸಿಕೊಳ್ಳಲಿದೆ. ರಿಲಯನ್ಸ್ ಕಮ್ಯುನಿಕೇಶನ್'ನ ನಿರ್ದಿಷ್ಟ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್'ನ ಅಂಗ ಸಂಸ್ಥೆ ರಿಲಯನ್ಸ್ ಜಿಯೋ ಗುರುವಾರ ಪ್ರಕಟಿಸಿದೆ. ಈ ಒಪ್ಪಂದದಿಂದಾಗಿ 45,000 ಕೋಟಿ ರೂ. ಸಾಲದ ಸುಳಿಗೆ ಸಿಲುಕಿರುವ ಆರ್'ಕಾಮ್'ಗೆ ನಿರಾಳತೆ ಸಿಕ್ಕಂತಾಗಿದೆ. ಅಲ್ಲದೇ ರಿಲಯನ್ಸ್ ಜೊಯೋ ವೈರ್'ಲೆಸ್ ಮತ್ತು ಸೈಬರ್ ಟು ಹೋಮ್ ಹಾಗೂ ಉದ್ಯಮ ಸೇವೆಗಳನ್ನು ಪರಿಚಯಿಸಲು ಈ ಒಪ್ಪಂದ ನೆರವು ನೀಡಲಿದೆ.
