ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅತ್ಯಧಿಕ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಒಂದೇ ದಿನಕ್ಕೆ 1.9 ಬಿಲಿಯನ್ ಡಾಲರ್ ನಷ್ಟ ಎದುರಿಸಿದ್ದಾರೆ. 

ಬೆಂಗಳೂರು :  ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ  ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಭಾರಿ ನಷ್ಟ ಎದುರಾಗಿದೆ. 

ಕಳೆದ ವಾರದಲ್ಲಿ ಅವರ ಉದ್ಯಮದಲ್ಲಿ ಅತೀ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. 

ಜಾಗತಿಕ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದ್ದು ಕಳೆದ ಸೆಪ್ಟೆಂಬರ್ 29ರವರೆಗೆ  47.2 ಬಿಲಿಯನ್ ಡಾಲರ್ ಇದ್ದ ಆದಾಯದ ಪ್ರಮಾಣ ಅಕ್ಟೋಬರ್ 5ರ ವೇಳೆಗೆ 39.5 ಬಿಲಿಯನ್ ಡಾಲರ್ ಆಗಿದೆ. 

ಒಟ್ಟು ನಾಲ್ಕು ವಹಿವಾಟು ಅವಧಿಯಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದು, 7.7 ಬಿಲಿಯನ್ ಡಾಲರ್  ನಷ್ಟ ಅನುಭವಿಸಿದ್ದಾರೆ. ಇದರಿಂದ ಒಂದು ದಿನಕ್ಕೆ 1.9 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದಂತಾಗಿದೆ.  

ರುಪಾಯಿ ಮೌಲ್ಯದಲ್ಲಿ ಇಳಿಕೆ, ಕಚ್ಚಾ ತೈಲ ಬೆಲೆ ಏರಿಕೆಯೇ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ.