ಪೆರು : ದಕ್ಷಿಣ ಅಮೆರಿಕಾದಲ್ಲಿ ಭಾನುವಾರ ಮದುವೆ ಸಮಾರಂಭವೊಂದು ಮಸಣವಾಗಿದ್ದು 15 ಮಂದಿ ಮೃತಪಟ್ಟಿದ್ದಾರೆ.  30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಇಲ್ಲಿನ ಅಲಂಬ್ರಾ ಪ್ರದೇಶದಲ್ಲಿರುವ ಹೋಟೆಲ್ ಒಂದರಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ನೃತ್ಯ ಮಾಡುತ್ತಿದ್ದವರ ಮೇಲೆ ಅಪಾರ ಪ್ರಮಾಣದಲ್ಲಿ ಮಣ್ಣು ಕುಸಿದು ದುರಂತ ಸಂಭವಿಸಿದೆ. 

ಈ ಸಮಾರಂಭದಲ್ಲಿ 100ಕ್ಕೂ ಅಧಿಕ  ಮಂದಿ ಅತಿಥಿಗಳು ಪಾಲ್ಗೊಂಡಿದ್ದು ಇದರಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಮೇಯರ್ ಮಾಹಿತಿ ನೀಡಿದ್ದಾರೆ. 

ಏಕಾಏಕಿ ಮಣ್ಣು ಕುಸಿದು, ಹೋಟೆಲ್ ಛಾವಣಿ ಕುಸಿದು ಬಿದ್ದಿದೆ. ಇದರಿಂದ ಹೆಚ್ಚಿನ ಸಾವು ನೋವಾಗಿದೆ.