ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಹೆಸರನ್ನು ಪದ್ಮಭೂಷಣ ಪ್ದರಶಸ್ತಿಗೆ ಬಿಸಿಸಿಐ ಶಿಫಾರಸ್ಸು ಮಾಡಿದೆ. ಪದ್ಮಭೂಷಣ ಪ್ರಶಸ್ತಿ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯಾಗಿದೆ. ಬಿಸಿಸಿಐ ಜಾರಿಗೊಂಡ ಆದೇಶದನ್ವಯ ಕೇವಲ ಧೋನಿಯ ಹೆಸರನ್ನು ಈ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ ಎಂಬ ವಿಚಾರ ತಿಳಿದು ಬಂದಿದೆ.

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಬಿಸಿಸಿಐ ಶಿಫಾರಸ್ಸು ಮಾಡಿದೆ. ಪದ್ಮಭೂಷಣ ಪ್ರಶಸ್ತಿ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯಾಗಿದೆ. ಬಿಸಿಸಿಐ ಜಾರಿಗೊಂಡ ಆದೇಶದನ್ವಯ ಕೇವಲ ಧೋನಿಯ ಹೆಸರನ್ನು ಈ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ ಎಂಬ ವಿಚಾರ ತಿಳಿದು ಬಂದಿದೆ.

ಈ ವಿಚಾರವಾಗಿ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು 'ಪದ್ಮಭೂಷಣ ಪ್ರಶಸ್ತಿಗೆ ಧೋನಿಯ ಹೆಸರನ್ನು ಶಿಫಾರಸ್ಸು ಮಾಡುವ ವಿಚಾರವಾಗಿ ಬಿಸಿಸಿಐನ ಯಾವೊಬ್ಬ ಅಧಿಕಾರಿಗಳ ನಡುವೆ ಯಾವುದೇ ಭಿನ್ನಮತವಿರಲಿಲ್ಲ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2011ರ ವಿಶ್ವಕಪ್ ಹಾಗೂ 2007ರ ಟಿ 20 ವಿಶ್ವಕಪ್'ನ್ನು ಗೆದ್ದಿತ್ತು. ಅಲ್ಲದೇ ಧೋನಿ ಏಕದಿನ ಪಂದ್ಯದಲ್ಲಿ 10000 ರನ್ ಪೂರೈಸುವ ಸಮೀಪದಲ್ಲಿದ್ದಾರೆ ಹಾಗೂ 90ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಹೀಗಿರುವಾಗ ಈ ಪ್ರಶಸ್ತಿ ಪಡೆಯಲು ಧೋನಿಗಿಂತ ಉತ್ತಮ ವ್ಯಕ್ತಿ ಬೇರ್ಯಾರೂ ಇಲ್ಲ' ಎಂದಿದ್ದಾರೆ

ಇದಕ್ಕೂ ಮೊದಲು ಕ್ಯಾಪ್ಟನ್ ಕೂಲ್ ಎಂದೇ ಪ್ರಸಿದ್ಧಿ ಗಳಿಸಿದ್ದ ಮಹಿ ಖೇಲ್ ರತ್ನ, ಪದ್ಮಶ್ರೀ, ಹಾಗೂ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು. ಒಂದು ವೇಳೆ ಧೋನಿಯ ಹೆಸರು ಪದ್ಮಭೂಷಣ ಪ್ರಶಸ್ತಿಗೆ ಫೈನಲ್ ಆದರೆ ಈ ಪ್ರಶಸ್ತಿಯನ್ನು 11ನೇ ಕ್ರಿಕೆಟರ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಧೋನಿಗಿಂತ ಮೊದಲು, ಸಚಿನ್ ತೆಂಡುಲ್ಕರ್, ಕಪಿಲ್ ದೇವ್, ಸುನಿಲ್ ಗಾವಸ್ಕರ್, ರಾಹುಲ್ ದ್ರಾವಿಡ್ ಸೇರಿದಂತೆ ಕ್ರಿಕೆಟಿಗರು ಪ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ.