ಒಪ್ಪಂದದ ಪ್ರಕಾರ ಮೊಬಿಲಿಂಕ್ ಕಂಪನಿಯ ಡಿಸೆಂಬರ್ 2012ಕ್ಕೆ ಮುಗಿದಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಮೊಬೈಲ್ ಕಂಪನಿ ವಿರುದ್ದ ದೆಹಲಿ ಹೈಕೋರ್ಟ್ ಮೋರೆ ಹೋಗಿದ್ದಾರೆ.
ಮ್ಯಾಕ್ಸ್ ಮೊಬಿಲಿಂಕ್ ಪ್ರೈ ಲಿ ಕಂಪನಿ ವಿರುದ್ಧ ಹೈಕೋರ್ಟ್ ಮೋರೆ ಹೋಗಿರುವ ಧೋನಿ ಕಂಪನಿಯು ಕರಾರು ಮುಗಿದ ನಂತರವೂ ನನ್ನ ಭಾವಚಿತ್ರವನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಒಪ್ಪಂದದ ಪ್ರಕಾರ ಮೊಬಿಲಿಂಕ್ ಕಂಪನಿಯ ಡಿಸೆಂಬರ್ 2012ಕ್ಕೆ ಮುಗಿದಿದೆ.ಅವಧಿ ಮುಗಿದರೂ ಆದರೂ ಸಂಸ್ಥೆಯು ಧೋನಿಯವರ ಭಾವಚಿತ್ರವನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದ್ದು ನಷ್ಟವನ್ನು ತುಂಬಿಕೊಡಬೇಕೆಂದು ಧೋನಿ ಪರ ವಕೀಲರು ಕೋರ್ಟ್'ನಲ್ಲಿ ದಾವೆ ಹೂಡಿದ್ದಾರೆ.
