ನವದೆಹಲಿ[ಫೆ. 27] ಪಾಕಿಸ್ತಾನಕ್ಕೆ ನುಗ್ಗಿ ಜೈಶ್ ಉಗ್ರ ಸಂಘಟನೆಗಳ ಅಡಗುತಾಣಗಳ ಮೇಲೆ ಭಾರತದ ವಾಯು ಸೇನೆ ದಾಳಿ ಮಾಡಿದ್ದನ್ನೇ ತಪ್ಪು ಎಂದು ಹೇಳಿದ್ದ  ಉತ್ತರ ಪ್ರದೇಶದ ಮಾಜಿ ಸಚಿವ , ಸಮಾಜವಾದಿ ಪಕ್ಷದ ಹಿರಿಯ ನಾಯಕ ವಿನೋದ್ ಕುಮಾರ್ ಅವರಿಗೆ ಸಂಸದ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.

‘ಯಾವ ಸಂದರ್ಭದಲ್ಲಿ ಭಾರತದ  ಮಹಿಳೆ, ಮಕ್ಕಳು ಆದಿಯಾಗಿ ಪ್ರತಿಯೊಬ್ಬರು ದೇಶಕ್ಕೆ ಬೆಂಬಲ ನೀಡುತ್ತಾ, ಉಗ್ರರ ವಿರುದ್ಧ ದನಿ ಎತ್ತುತ್ತಿದ್ದರೆ ನೀವು ಮಾತ್ರ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಮುಳುಗದ್ದಿರೋ ಅಥವಾ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಿರೋ ಅಥವಾ ಮಾರ್ಕಿಸ್ಟ್ ವಾದದ ಹೆಸರಿನಲ್ಲಿ ಕೀಳು ಮಟ್ಟಕ್ಕೆ ಇಳಿದಿರೋ....'

ಪೈಲೆಟ್ ಮಾಹಿತಿ ನೀಡಿ: ಪಾಕ್ ಗೆ ಸಮನ್ಸ್ ಜಾರಿ!

ಹೌದು.. ಈ ರೀತಿ ಟ್ವೀಟ್ ಮಾಡಿರುವ ಸಂಸದ ರಾಜೀವ್ ಚಂದ್ರಶೇಖರ್ ದೇಶ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಪಿಲ್ ಸಿಬಲ್, ಅಖಿಲೇಶ್ ಯಾದವ್ ಅಂಥವರನ್ನು ಹಿಂದಕ್ಕೆ ಹಾಕುವಂತಹ ಹೇಳಿಕೆ ಇದು. ಇಂಥವರನ್ನು ಬೇರು ಸಮೇತ ಕಿತ್ತೆಸೆಯುವ ಕಾಲ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಮೂಲಕ ಚಾಟಿ ಬೀಸಿದ್ದು ಟ್ವೀಟ್ ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ.

ಲೋಕಸಭಾ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಉದ್ದೇಶ ಪೂರ್ವಕವಾಗಿ ದಾಳಿ ಮಾಡಿದೆ ಎಂದು ಹೇಳಿಕೆ ನೀಡಿದ್ದ ಸಿಪಿಐಎಂ ಮುಖಂಡ ಕೋಡಿಯೇರಿ ಬಾಲಕೃಷ್ಣನ್ ಅವರನ್ನು ರಾಜೀವ್ ತರಾಟೆಗೆ ತೆಗೆದುಕೊಂಡಿದ್ದಾರೆ.